

ಸಿಡಿಯ ಒಂದು ಭಾಗ ಕುಸಿದು ಹಾಳಾಗಿದ್ದು, ಅಪಾಯ ತಂದೊಡ್ಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಪಪಂ ಮುಖ್ಯಾಧಿಕಾರಿಗಳನ್ನು ಕೇಳಿದರೆ, ಇದನ್ನು ಸರಿಪಡಿಸಲು ಕನಿಷ್ಠ 80 ಸಾವಿರ ರೂ. ಅನುದಾನ ಬೇಕು. ಅನುದಾನ ಬಂದ ಕೂಡಲೇ ಸಿಡಿ ನಿರ್ಮಿಸಲಾಗುವುದು ಎನ್ನುತ್ತಾರೆ. ಅಧಿಕಾರಿಗಳು ಅನುದಾನದ ಕುಂಟು ನೆಪ ಹೇಳದೆ ಹೊಸದಾಗಿ ಸಿಡಿ ನಿರ್ಮಿಸಬೇಕು. ಇಲ್ಲದೆ ಹೋದಲ್ಲಿ ಪಪಂ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.
ಒಡೆದು ಹಾಳಾದ ಸಿಡಿಯನ್ನು ಇಂಜನಿಯರ್ ಪರೀಶೀಲನೆ ನಡೆಸಿದ್ದಾರೆ. ಸಿಡಿಯ ಒಂದು ಭಾಗವನ್ನು ರಿಪೇರಿ ಮಾಡಲು ಬರುವುದಿಲ್ಲ. ಬದಲಿಗೆ ಹೊಸದಾಗಿ ಸಿಡಿ ನಿರ್ಮಿಸಬೇಕು. ಇದಕ್ಕೆ ಕನಿಷ್ಠ 80 ಸಾವಿರ ರೂ. ಅನುದಾನ ಬೇಕು ಅಂದಿದ್ದಾರೆ. ಇಲಾಖೆಯಲ್ಲಿ ಅನುದಾನದ ಕೊರತೆಯಿದೆ. ಅನುದಾನ ಬಂದ ಕೂಡಲೇ ಸಿಡಿ ನಿರ್ಮಿಸಲಾಗುವುದು.