Development ಅಭಿವೃದ್ಧಿಯಲ್ಲಿ ತಾರತಮ್ಯ ಇರಬಾರದು

ಸವಣೂರ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ 100 ಹಾಸಿಗೆ ತಾಲೂಕು ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಿದರು.
ಸವಣೂರ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ 100 ಹಾಸಿಗೆ ತಾಲೂಕು ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಿದರು.
Published on
ಸವಣೂರ: ಜನರು ಕಟ್ಟಿದ ತೆರಿಗೆ ಹಣದಲ್ಲಿ ಸರ್ಕಾರಗಳು ಕೈಗೊಳ್ಳುವ ಅಭಿವೃದ್ಧಿಯಲ್ಲಿ ತಾರತಮ್ಯ ಇರಬಾರದು ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ 100 ಹಾಸಿಗೆ ತಾಲೂಕು ಆಸ್ಪತ್ರೆ ನಿರ್ವಣಕ್ಕೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿ, ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಿಗ್ಗಾಂವಿಗೆ ಬಸವರಾಜ ಬೊಮ್ಮಾಯಿ ಅವರು ನೀಡಿದ್ದ 250 ಹಾಸಿಗೆ ಆಸ್ಪತ್ರೆಯ ಸಂಪೂರ್ಣ ಕಾಮಗಾರಿ ಕೈಗೊಂಡು ಇಂದು ಉದ್ಘಾಟಿಸಿದ್ದೇವೆ. ಸವಣೂರಿಗೆ ಬೊಮ್ಮಾಯಿ ಅವರು ದೊಡ್ಡ ಆಯುರ್ವೆದ ಕಾಲೇಜ್ ನೀಡಿದ್ದಾರೆ. ಕಾಲೇಜ್ ಉದ್ಘಾಟಿಸಿ ಹಂತ ಹಂತವಾಗಿ ಸಿಬ್ಬಂದಿ ನೀಡಲಾಗುವುದು ಎಂದರು.
ಶಾಸಕ ಯಾಸೀರಖಾನ್ ಪಠಾಣ ಮಾತನಾಡಿ, ಸವಣೂರಿಗೆ ಈಗ 20 ದಿನಕ್ಕೆ ಒಮ್ಮೆ ನೀರು ಬರುತ್ತಿದೆ. ಮುಂದಿನ ವರ್ಷ ನಿತ್ಯ ನೀರು ಸರಬರಾಜಿಗೆ 350 ಕೋಟಿ ರೂ. ಅನುದಾನದಲ್ಲಿ ಕೆಲಸ ಆರಂಭಿಸಲಾಗುತ್ತಿದೆ. ನಾನು ಶಾಸಕನಾದ ಮೇಲೆ ಸರ್ಕಾರ 1300 ಕೋಟಿ ರೂ. ಅನುದಾನದ ಆದೇಶ ಪತ್ರ ತಂದಿದ್ದೇನೆ. ನಾವು ಕೈಗೊಳ್ಳವ ಅಭಿವೃದ್ಧಿ ಕೆಲಸವನ್ನು ಬಿಜೆಪಿಯವರು ನಮ್ಮ ಸರ್ಕಾರ ನೀಡಿದ ಅನುದಾನದಲ್ಲಿ ಮಾಡುತ್ತಿರುವುದು ಎಂದು ಸುಳ್ಳು ಹಬ್ಬಿಸುತ್ತಿದ್ದಾರೆ ಎಂದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಜಿಲ್ಲಾಧಿಕಾರಿ ಡಾ. ವಿಜಯಮಾಂತೇಶ ದಾನಮ್ಮನವರ, ಜಿಪಂ ಸಿಇಒ ರುಚಿ ಬಿಂದಾಲ್, ಎಸ್​ಪಿ ಯಶೋಧಾ ವಂಟಗೋಡಿ, ತಹಸೀಲ್ದಾರ್ ರವಿಕುಮಾರ ಕೊರವರ, ಬಿ.ಎಸ್. ಶಿಡೇನೂರ, ಟಿಎಚ್​ಒ ಡಾ. ಚಂದ್ರಕಲಾ ಜೆ., ಡಾ. ಶಂಕರಗೌಡ ಹಿರೇಗೌಡ, ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ಸುಭಾಸ ಮಜ್ಜಗಿ, ಎಂ.ಜೆ. ಮುಲ್ಲಾ, ಪ್ರಮುಖರಾದ ಭರತ್ ಬೊಮ್ಮಾಯಿ, ಸಂಜೀವಕುಮಾರ ನೀರಲಗಿ, ನಾಗಪ್ಪ ತಿಪ್ಪಕ್ಕನವರ, ರಾಘವೇಂದ್ರ ಬಾಲೇಹೊಸೂರ, ಲಕ್ಷ್ಮಣ ಕನವಳ್ಳಿ, ಸಚಿನ ಪೂಜಾರ, ಮಹೇಶ ಅಪ್ಪಣ್ಣನವರ, ಪುಟ್ಟೇಶ ಕಳ್ಳಿಮನಿ, ಪಾಂಡಪ್ಪ ತಿಪ್ಪಕ್ಕನವರ, ರಮೇಶ ದುಗ್ಗತ್ತಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net