ಕಳೆದ ವರ್ಷ ಹಲವು ಬಾರಿ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದ ಬಳಿಕ ಸಣ್ಣ ನೀರಾವರಿ ಇಲಾಖೆ ಬಾಂದಾರಗಳಿಗೆ ಗೇಟ್ಗಳನ್ನು ಅಳವಡಿಸಲಾಗಿತ್ತು. ಗೇಟ್ ಅಳವಡಿಕೆ ವಿಳಂಬವಾದ ಕಾರಣ ನದಿಯಲ್ಲಿ ದೊಡ್ಡ ಗುಂಡಿಗಳು ತುಂಬದೇ ಹಾಗೆಯೇ ಉಳಿದುಕೊಂಡವು. ಇದರಿಂದ ಅಂತರ್ಜಲ ಮಟ್ಟ ಕುಸಿದು ಬೇಸಿಗೆಯಲ್ಲಿ ಸಮಸ್ಯೆಯಾಗಿತ್ತು. ಈ ಕೂಡಲೇ ಗೇಟ್ ಅಳವಡಿಸುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗಬೇಕು. ನದಿ ನೀರು ಸಂಗ್ರಹಿಸಿ ಅಂತರ್ಜಲ ವೃದ್ಧಿಗೆ ಅನುಕೂಲ ಮಾಡಬೇಕು.
| ಕರಬಸಪ್ಪ ಬಸಾಪುರ, ಸಣ್ಣಗುಬ್ಬಿ ಗ್ರಾಮಸ್ಥ.
ಕುಮದ್ವತಿ ನದಿಯ ನಾಲ್ಕು ಬಾಂದಾರಗಳಿಗೆ ವಿಳಂಬ ಮಾಡದೆ ಈ ವಾರದೊಳಗೆ ಗೇಟ್ಗಳನ್ನು ಅಳವಡಿಸಲಾಗುವುದು.
| ಮನೋಹರ ಹಾದಿಮನಿ, ಎಇಇ- ಸಣ್ಣ ನೀರಾವರಿ ಇಲಾಖೆ ಉಪವಿಭಾಗ ಹಾನಗಲ್ಲ.