ಪಟ್ಟಣದ ಬಿಂದುಶ್ರೀ ಜಗದೀಶ ಪವಾರ ನೀಟ್ ಪರೀಕ್ಷೆ ಬರೆದಿದ್ದಳು. ಫಲಿತಾಂಶದಲ್ಲಿ 11 ಅಂಕ ಬಂದಿರುವುದನ್ನು ನೋಡಿ ಗಲಿಬಿಲಿಗೊಂಡ ಬಿಂದುಶ್ರೀ, ತಂದೆ-ತಾಯಿ ಸಲಹೆಯಂತೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಗೆ (ಎನ್ಟಿಎ) ಶುಲ್ಕ ಪಾವತಿಸಿ, ವೆಬ್ಸೈಟ್ನಿಂದ ತನ್ನ ಒಎಂಆರ್ ಡೌನ್ಲೋಡ್ ಮಾಡಿಕೊಂಡಿದ್ದಾಳೆ. ಆದರೆ, ಒಎಂಆರ್ ಶೀಟ್ ಬದಲಾಗಿರುವುದು ಕಂಡುಬಂದಿದೆ. ನಂತರ ನ್ಯಾಯಕ್ಕಾಗಿ ಎನ್ಟಿಎ ಹಾಗೂ ಜಿಲಾಧಿಕಾರಿ ಕಚೇರಿ ಬಾಗಿಲು ತಟ್ಟಿದ್ದಾಳೆ.