ಕಟ್ಟಡಗಳ ಪರಿಶೀಲನೆ ಮಾಡಿ, ದುರಸ್ತಿ ಹಾಗೂ ಶಿಥಿಲಗೊಂಡ ನೆಲಸಮಗೊಳಿಸಿ ಕೊಠಡಿಗಳನ್ನು ನಿರ್ವಿುಸಲಾಗುವುದು. ತಕ್ಷಣದಲ್ಲಿ ತಾಪಂ ಅನುದಾನದಲ್ಲಿ ದುರಸ್ತಿ ಮಾಡಲಾಗುವುದು. ಸ್ಥಳದಲ್ಲಿಯೇ ಕಟ್ಟಡ ನಿರ್ವಣಕ್ಕೆ ಆದೇಶ ನೀಡಲು ಬರಲ್ಲ. ಸರ್ಕಾರ ಕೆಲಸಗಳಿಗೆ ತನ್ನದೇ ಆದ ಪ್ರಕ್ರಿಯೆ ಇರುತ್ತದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಪ್ರಾಥಮಿಕ ಶಾಲೆಗಳಿಗೆ ಉತ್ತಮ ವ್ಯವಸ್ಥೆ ಕಲ್ಪಿಸುವ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಕರ್ನಾಟಕ ಪಬ್ಲಿಕ್ ಸ್ಕೂಲ್ ಆರಂಭಿಸಲಾಗುತ್ತಿದ್ದು, ಉತ್ತಮ ಶಾಲೆಗಳನ್ನು ನಿರ್ವಿುಸಲಾಗುವುದು. ನಂತರ ಮಕ್ಕಳಿಗೆ ಸುಜಜ್ಜಿತ ಕೊಠಡಿಗಳನ್ನು ನಿರ್ವಿುಸಲಾಗುವುದು. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಭರವಸೆ ನೀಡಿದರು. ನಂತರ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.
ನಂತರ ಶಾಲಾ ಕೊಠಡಿಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ, ಕೊಠಡಿಗಳ ದುರಸ್ತಿ, ಶಿಥಿಲಗೊಂಡ ಕೊಠಡಿಗಳ ನೆಲಸಮ ಮಾಡಿ ನೂತನ ಕೊಠಡಿ ನಿರ್ವಣಕ್ಕೆ ಸ್ಥಳದಲ್ಲಿ ಅಧಿಕಾರಿಗಳು, ಇಂಜಿನಿಯರ್ಗೆ ಸೂಚಿಸಿದರು.
ಜಿಪಂ ಸಿಇಒ ದಲ್ಜಿತಕುಮಾರ, ತಾಪಂ ಇಒ ಪಿ.ಎನ್. ಹುಬ್ಬಳ್ಳಿ, ಉಪ ತಹಸೀಲ್ದಾರ್ ಚಿದಾನಂದ ಗೊಣಸಗಿ, ಡಿಡಿಪಿಐ ಮೋಹನ ದಂಡಿನ, ಬಿಇಒ ಶ್ರೀನಿವಾಸ ಬಿ., ಕಂದಾಯ ನಿರೀಕ್ಷಕ ಆರ್.ಎನ್. ಮಲ್ಲಾಡದ, ದೈಹಿಕ ಶಿಕ್ಷಣ ಪರಿವೀಕ್ಷಕ ವಿನಾಯಕ ಗಡ್ಡದ, ಪಿಎಸ್ಐ ಪರಶುರಾಮ ಲಮಾಣಿ, ಸಿಆರ್ಪಿ ಮೈತ್ರಾ ಪುಟ್ಟಣ್ಣನವರ, ಪಿಡಿಒ ಅಮರೇಗೌಡ ಜಾರಡ್ಡಿ ಇದ್ದರು.
ಧರಣಿಯಲ್ಲಿ ಪಾಲಕರಾದ ಮಾರುತಿ ಗೊರವರ, ವಿಜಯರಡ್ಡಿ ಭರಮರಡ್ಡೇರ, ಶಂಭುಲಿಂಗ ಅಣ್ಣಿಗೇರಿ, ಚನ್ನವೀರಯ್ಯ ಹಿರೇಮಠ, ಮಂಜುನಾಥ ಮರ್ಚರಡ್ಡೇರ, ವೆಂಕಟೇಶ ಶೇಷನಗೌಡ್ರ, ವಿ.ಎಂ. ಅಣ್ಣಿಗೇರಿ, ಹನುಮಂತ ಬನ್ನಿಮಟ್ಟಿ, ದಯಾನಂದ ಈರಪ್ಪನವರ, ಮಂಜುನಾಥ ನಿಂಬಣ್ಣನವರ, ಬರಮಗೌಡ ದೊಡ್ಡಗೌಡ್ರ, ರಾಮಲಿಂಗ ಅಣ್ಣಿಗೇರಿ, ಲಲಿತಾ ಅಣ್ಣಿಗೇರಿ, ಬೇಬಿ ಚನ್ನದಾಸರ, ರೇಖಾ ಅಣ್ಣಿಗೇರಿ, ವಿಜಯಲಕ್ಷ್ಮೀ ದೇಶಗತ್ತಿ, ಸಂಜೀವ ಘೊರ್ಪಡೆ, ಮಾಲತೇಶ ಓಲೇಕಾರ, ಪ್ರಮೋದ ಮರ್ಚರಡ್ಡಿ, ಸಿ.ಡಿ ಬಡಲಿಂಗಣ್ಣನವರ, ಪ್ರಭುರಡಡಿ ಭರಮರಡ್ಡೇರ, ಬಿ.ಕೆ ಅಣ್ಣಿಗೇರಿ, ಸಂತೋಷ ಸೊಪ್ಪಿನ ಇತರರಿದ್ದರು.