Vijayotsava: ರಾಜ್ಯದ ಮೇಲೆ ಪರಿಣಾಮ ಬೀರಲಿದೆ ಬಿಹಾರ ಚುನಾವಣೆ

ಬಿಹಾರ ಚುನಾವಣೆ ಬಿಜೆಪಿ ಮೈತ್ರಿಕೂಟ ವಿಜಯಿಯಾದ ಹಿನ್ನೆಲೆಯಲ್ಲಿ  ಬ್ಯಾಡಗಿಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಲಾಯಿತು.
ಬಿಹಾರ ಚುನಾವಣೆ ಬಿಜೆಪಿ ಮೈತ್ರಿಕೂಟ ವಿಜಯಿಯಾದ ಹಿನ್ನೆಲೆಯಲ್ಲಿ ಬ್ಯಾಡಗಿಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಲಾಯಿತು.
Published on
ವಿಜಯವಾಣಿ ಸುದ್ದಿಜಾಲ ಬ್ಯಾಡಗಿ
ಬಿಹಾರದಲ್ಲಿ ಬಿಜೆಪಿ ಎನ್‌ಡಿಎ ಮೈತ್ರಿಕೂಟ ಭಾರಿ ಬಹುಮತದಲ್ಲಿ ಜಯ ಗಳಿಸಿದ ಹಿನ್ನೆಲೆಯಲ್ಲಿ ಬ್ಯಾಡಗಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಶುಕ್ರವಾರ ವಿಜಯೋತ್ಸವ ಆಚರಿಸಿದರು. 
ಈ ವೇಳೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ, ಕೇಂದ್ರದಲ್ಲಿ ಬಿಜೆಪಿ ಸಂವಿಧಾನಾತ್ಮಕವಾಗಿ ಆಡಳಿತ ನಡೆಸುತ್ತಿದೆ. ಕಳೆದ ಎರಡು ದಶಕಗಳ ಕಾಲ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಜಿ ನೇತೃತ್ವದಲ್ಲಿ ಅಭಿವೃದ್ಧಿ ಪರ್ವ ನಡೆದಿದೆ. ಭವಿಷ್ಯದ ಎಲ್ಲ ಚುನಾವಣೆಗಳಲ್ಲೂ ಮತದಾರರು ಬಿಜೆಪಿ ಬೆಂಬಲಿಸಲಿದ್ದಾರೆ. ಬಿಹಾರ ಚುನಾವಣೆ ಫಲಿತಾಂಶ ರಾಜ್ಯದ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದರು.
ರೈತರಿಗೆ ರಾಜ್ಯ ಸರ್ಕಾರಿ ಬೆಳೆ ಪರಿಹಾರ ಸೇರಿದಂತೆ ಹಲವು ಸೌಲತ್ತು ನೀಡುವಲ್ಲಿ ಕೇಂದ್ರದತ್ತ ಬೊಟ್ಟು ಮಾಡುವುದು ಸರಿಯಲ್ಲ. ತನ್ನ ಪಾಲಿನ ಪರಿಹಾರವನ್ನು ಮೊದಲು ನೀಡಲಿ. ಕೇಂದ್ರ ರೈತಪರ ನಿಲುವು ಹೊಂದಿದ್ದು, ದೊಡ್ಡ ಮೊತ್ತದಲ್ಲಿ ಪರಿಹಾರ  ನೀಡಿದೆ. ಗೋವಿನ ಜೋಳದ ಖರೀದಿ ಕೇಂದ್ರ ತೆರೆಯುವುದು ರಾಜ್ಯ ಸರ್ಕಾರದ ಜವಾಬ್ದಾರಿ. ಎಲ್ಲದಕ್ಕೂ ಕೇಂದ್ರ ಸರ್ಕಾರ ತೋರಿಸುವ ಮೂಲಕ ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದೆ ಎಂದರು.

ತಪ್ಪಾಗಿದೆ ಬೆಳೆ ಸಮೀಕ್ಷೆ

ರಾಜ್ಯದಲ್ಲಿ 17 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 54 ಲಕ್ಷ ಮೆಟ್ರಿಕ್ ಟನ್ ಗೋವಿನ ಜೋಳ ಬೆಳೆಯಾಗಿದೆ. ಸುಮಾರ 2-3 ಲಕ್ಷ ಎಕರೆಯಲ್ಲಿ ಬೆಳೆಹಾನಿಯಾಗಿದ್ದು, ಎಲ್ಲ ತಾಲೂಕುಗಳಲ್ಲಿ ಶೇ.10 ರಷ್ಟು ನಾತ್ರ ಬೆಳೆ ಹಾನಿ ತೋರಿಸಿದ್ದಾರೆ. ಪರಿಣಾಮ ರಾಜ್ಯದ ಮೆಕ್ಕೆಜೋಳ ರೈತರಿಗೆ ಅನ್ಯಾಯವಾಗುತ್ತಿದೆ. ಮೊದಲು ಸಮೀಕ್ಷೆ ಸರಿಪಡಿಸಿ ಆ ಪರಿಹಾರ ನೀಡಲಿ ಎಂದರು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ, ತಾಲೂಕು ಬಿಜೆಪಿ ಅಧ್ಯಕ್ಷ ನಿಂಗಪ್ಪ ಬಟ್ಟಲಕಟ್ಟೆ, ಮಾಜಿ ಅಧ್ಯಕ್ಷ ಶಿವಯೋಗಿ ಶಿರೂರು, ಬಿಜೆಪಿ ಮುಖಂಡರಾದ ಸುಭಾಸ ಮಾಳಗಿ, ವಿನಯಕುಮಾರ ಹಿರೇಮಠ, ಸರೋಜವ್ವ ಉಳ್ಳಾಗಡ್ಡಿ, ವಿಜಯ ಬಳ್ಳಾರಿ, ಶಂಕ್ರಪ್ಪ ಮಾತನವರ ಇತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net