

ಹಾವೇರಿ: ಯುವಕರ ಬಟ್ಟೆ ಬಿಚ್ಚಿಸಿ ಅದನ್ನು ವೀಡಿಯೊ ಚಿತ್ರಿಕರಣ ಮಾಡಿದ ಆರೋಪದಡಿ ಇಬ್ಬರು ಆರೋಪಿಗಳನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರದ ನಾಗೇಂದ್ರನಮಟ್ಟಿಯ ನಿವಾಸಿಗಳಾದ ಸುದೀಪ ದೊಡ್ಡಮನಿ ಹಾಗೂ ಸುದೀಪ ದ್ಯಾಮಪ್ಪ ಕುಂಚಿಕೊರವರ ಬಂಧಿತ ಆರೋಪಿಗಳು.
ಇವರು ಮೇ 5ರಂದು ಇಲ್ಲಿಯ ಕಾಗಿನೆಲೆ ರಸ್ತೆಯಲ್ಲಿರುವ ಕೆಳಸೇತುವೆ ಬಳಿ ಸವಣೂರಿನ ಅಣ್ಣ-&ತಮ್ಮ ಹಾಗೂ ಅವರ ಸ್ನೇಹಿತನ ಬಟ್ಟೆ ಬಿಚ್ಚಿಸಿ ವಿಡಿಯೊ ಚಿತ್ರೀಕರಿಸಿ ಬ್ಲಾ$್ಯಕ್ಮೇಲ್ ಮಾಡಿ 16 ಸಾವಿರ ರೂ. ಸುಲಿಗೆ ಮಾಡಿದ್ದರು. ಈ ಕುರಿತು ಸಂತ್ರಸ್ತ ಯುವಕರು ಪೊಲೀಸರಿಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು ಸಿಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಪತ್ತೆ ಮಾಡಿದ್ದಾರೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳು ಮತ್ತಷ್ಟು ಪ್ರಕರಣಗಳಲ್ಲಿ ಭಾಗಿಯಾಗಿರುವ ಮಾಹಿತಿಯಿದೆ. ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.