ಪುರಾಣ ಮಂಗಲದ ನಿಮಿತ್ತ ಸಂಭ್ರಮದ ಪಲ್ಲಕ್ಕಿ ಉತ್ಸವ

ಮೆರವಣಿಗೆ
ಮೆರವಣಿಗೆ
Published on

ರಾಣೆಬೆನ್ನೂರು: ಇಲ್ಲಿಯ ವಾಗೀಶ ನಗರದ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಅಧಿಕ ಮಾಸದ ಅಂಗವಾಗಿ ಹಮ್ಮಿಕೊಂಡಿದ್ದ ಶ್ರೀ ಗುರು ಸಿದ್ಧಾರೂಢ ಸ್ವಾಮೀಜಿಯ ಪುರಾಣ ಪ್ರವಚನದ ಮಂಗಲದ ಹಿನ್ನಲೆಯಲ್ಲಿ ನಗರದಲ್ಲಿ ಪಲ್ಲಕ್ಕಿ ಉತ್ಸವ ನಡೆಯಿತು.

ಐರಣಿ ಹೊಳೆಮಠದ ಬಸವರಾಜ ದೇಶಿಕೇಂದ್ರ ಪರಮಹಂಸ ಸ್ವಾಮೀಜಿ, ಸಿದ್ಧಾರೂಡ ಭಾರತಿ ಸ್ವಾಮೀಜಿ, ಪ್ರವಚನಕಾರ ಜೋಡಕುರಳಿ ಚಿದ್ಘನಾನಂದ ಭಾರತಿ ಸ್ವಾಮೀಜಿ ನೇತೃತ್ವದಲ್ಲಿ ಮೇಡ್ಲೇರಿ ಚೌಡೇಶ್ವರಿ ದೇವಸ್ಥಾನದಿಂದ ಸಕಲ ವಾದ್ಯಗಳೊಂದಿಗೆ ಆರಂಭವಾದ ವೀರಭದ್ರೇಶ್ವರ ದೇವರ ಪಾಲಕಿ ಉತ್ಸವ, ಸದ್ಗುರು ಸಿದ್ಧಾರೂಢ ಸ್ವಾಮೀಜಿಯ ಆನೆ ಅಂಬಾರಿಯ ಉತ್ಸವ, ಸದ್ಗುರು ಮುಪ್ಪಿನಾರ್ಯ ಸ್ವಾಮೀಜಿಯ ಪಾಲಕಿ ಉತ್ಸವ ವಾಗೀಶ ನಗರದ ವೀರಭದ್ರೇಶ್ವರ ದೇವಸ್ಥಾನ ತಲುಪಿತು.

ನಂತರ ಪುರಾಣ ಪ್ರವಚನ ಮಂಗಲ ಹಾಗೂ ಕೈಲಾಸ ಮಂಟಪದ ಮಹಾಪೂಜೆ ನೆರವೇರಿಸಲಾಯಿತು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜಣ್ಣ ಮೋಟಗಿ, ಪ್ರಮುಖರಾದ ಬಾಬಣ್ಣ ಶೆಟ್ಟರ, ಜಿ.ಜಿ. ಹೊಟ್ಟಿಗೌಡ್ರ, ವೀರುಪಾಕ್ಷಪ್ಪ ಅಂಗಡಿ, ನಾಗರಾಜ ಮುಂಡಾಸದ, ಪವನಕುಮಾರ ಪಟ್ಟಣಶೆಟ್ಟಿ, ಆದರ್ಶ ಅಂಗಡಿ, ವಿನೋದ ಜಂಬಗಿ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net