ಮುದೇನೂರ ಗ್ರಾಪಂ ಪಿಡಿಒ, ಕಾರ್ಯದರ್ಶಿ ವಿರುದ್ಧ ಎಫ್ಐಆರ್

Crime
Crime
Published on

ರಾಣೆಬೆನ್ನೂರು: ಆರ್ಟಿಐ ಮಾಹಿತಿ ಹಕ್ಕಿನಡಿ ಅಜಿರ್ ಸಲ್ಲಿಸಿದ ವ್ಯಕ್ತಿಗೆ ಮಾಹಿತಿ ನೀಡದೆ ಜಾತಿನಿಂದನೆ ಮಾಡಿದ ಆರೋಪದಡಿ ತಾಲೂಕಿನ ಮುದೇನೂರ ಗ್ರಾಪಂ ಪಿಡಿಒ ಹಾಗೂ ಕಾರ್ಯದರ್ಶಿ ವಿರುದ್ಧ ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾಪಂ ಪಿಡಿಒ ಪ್ರಕಾಶ ಎಂ.ಕೆ. ಹಾಗೂ ಕಾರ್ಯದರ್ಶಿ ಹನುಮಂತಪ್ಪ ನಿಂಗಪ್ಪ ಹರಿಹರ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿರುವುದು.

ತಾಲೂಕಿನ ಖಂಡೇರಾಯನಹಳ್ಳಿಯ ಗೋಪಾಲ ನಾಗಪ್ಪ ಲಮಾಣಿ ಎಂಬುವರು ದೂರು ದಾಖಲಿಸಿದವರು. ಗ್ರಾಪಂನ ಶೌಚಗೃಹ ನಿಮಾರ್ಣ ಮತ್ತು ಚರಂಡಿ ಕಾಲುವೆ ನಿಮಾರ್ಣದ ಕುರಿತು ಮಾಹಿತಿ ಹಕ್ಕಿನಡಿ ಮಾಹಿತಿ ಕೇಳಿದಾಗ ಅಧಿಕಾರಿಗಳು ಮಾಹಿತಿ ನೀಡದೆ ಜಾತಿ ನಿಂದನೆ ಮಾಡಿ ಬೈದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net