ಸ್ಪರ್ಧೆಯಲ್ಲಿ ಕ್ರೀಡಾ ಮನೋಭಾವವಿರಲಿ

ಬ್ಯಾಡಗಿಯ ಎಸ್‌ಜೆಜೆಎಂ ಸರ್ಕಾರಿ ಕ್ರೀಡಾಂಗಣದಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಕ್ರೀಡೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿರೂಪಾಕ್ಷಪ್ಪ ಬಳ್ಳಾರಿ, ಡಿ.ಎಂ. ಸಾಲಿ, ಜೀತೇಂದ್ರ ಸುಣಗಾರ, ಅಧ್ಯಕ್ಷ ನಿಂಗಪ್ಪ ಬಟ್ಟಲಕಟ್ಟೆ, ಮುರಿಗೆಪ್ಪ ಶೆಟ್ಟರ, ಭರತ ಬೊಮ್ಮಾಯಿ ಇತರರಿದ್ದರು.
ಬ್ಯಾಡಗಿಯ ಎಸ್‌ಜೆಜೆಎಂ ಸರ್ಕಾರಿ ಕ್ರೀಡಾಂಗಣದಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಕ್ರೀಡೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿರೂಪಾಕ್ಷಪ್ಪ ಬಳ್ಳಾರಿ, ಡಿ.ಎಂ. ಸಾಲಿ, ಜೀತೇಂದ್ರ ಸುಣಗಾರ, ಅಧ್ಯಕ್ಷ ನಿಂಗಪ್ಪ ಬಟ್ಟಲಕಟ್ಟೆ, ಮುರಿಗೆಪ್ಪ ಶೆಟ್ಟರ, ಭರತ ಬೊಮ್ಮಾಯಿ ಇತರರಿದ್ದರು.
Published on
ಬ್ಯಾಡಗಿ: ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಹೆಚ್ಚಿಸುವಲ್ಲಿ ಕ್ರೀಡೆ ಸಹಕಾರಿಯಾಗಲಿದ್ದು, ಆಟಗಾರರು ಕ್ರೀಡಾಮನೋಭಾವದಿಂದ ಪಾಲ್ಗೊಂಡು ಪ್ರತಿಭೆಗಳನ್ನು ಹೊರಹಾಕಬೇಕಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.
ಎಸ್‌ಜೆಜೆಎಂ ಸರ್ಕಾರಿ ಕ್ರೀಡಾಂಗಣದಲ್ಲಿ ಜರುಗಿದ 2025-26ನೇ ಸಂಸದರ ಕ್ರೀಡಾಮಹೋತ್ಸವ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿ, ಸರ್ಕಾರ, ಸಂಘ-ಸಂಸ್ಥೆಗಳು ಕ್ರೀಡೆಗೆ ಉತ್ತೇಜನ ನೀಡುವಲ್ಲಿ ಸಹಕಾರ ನೀಡುವ ಮೂಲಕ ಆರ್ಥಿಕ ನೆರವು ಒದಗಿಸುವುದು ಮಹತ್ವವಾಗಿದೆ. ತಮ್ಮ ಕ್ಷೇತ್ರಗಳಲ್ಲಿ ಜರುಗುವ ಕ್ರೀಡಾ ಕಾರ್ಯಕ್ರಮಗಳಿಗೆ ನೆರವು ಒದಗಿಸುವೆ. 16 ವರ್ಷ ಮೇಲ್ಪಟ್ಟ ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಅವಕಾಶವಿದ್ದು, ಕ್ರೀಡಾಮನೋಭಾವದಿಂದ ಆಟದಲ್ಲಿ ಭಾಗವಹಿಸಬೇಕಿದೆ ಎಂದರು.
ಬಿಜೆಪಿ ಅಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಪಟ್ಟಣದ ಸೇರಿದಂತೆ ಎಲ್ಲ ಗ್ರಾಮೀಣ ಪ್ರದೇಶದಲ್ಲಿ ಕ್ರೀಡಾಪಟುಗಳು ಪಾಲ್ಗೊಂಡಿದ್ದು ಸಂತಸ ತಂದಿದೆ. ಸಂಸದರ ಕ್ಷೇತ್ರದ ಎಲ್ಲ ವಿಧಾನಸಭೆ ಮತಕ್ಷೇತ್ರಗಳಲ್ಲಿ ಸಂಸದರ ಕ್ರೀಡಾ ಮಹೋತ್ಸವ ಆಯೋಜಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಇಲ್ಲಿ ಆಯ್ಕೆಗೊಂಡ ಕ್ರೀಡಾಪಟುಗಳನ್ನು ಗುರ್ತಿಸಿ ಪ್ರಶಸ್ತಿ, ನಗದು ನೀಡುವುದರ ಜತೆ ಸಾಧಕರಿಗೆ ಉತ್ತಮ ಭವಿಷ್ಯವಿದೆ ಎಂದರು.
ಈ ವೇಳೆ ಮಾಜಿ ಸಚೇತಕ ಡಿ.ಎಂ. ಸಾಲಿ, ರಾಷ್ಟ್ರೀಯ ಖೋಖೋ ತರಬೇತುದಾರ ಜೀತೇಂದ್ರ ಸುಣಗಾರ, ಸುಜಯಕುಮಾರ, ಸಿ.ಜೆ. ಚಕ್ರಸಾಲಿ, ಬಿಜೆಪಿ ತಾಲೂಕು ಅಧ್ಯಕ್ಷ ನಿಂಗಪ್ಪ ಬಟ್ಟಲಕಟ್ಟೆ, ಮುರಿಗೆಪ್ಪ ಶೆಟ್ಟರ, ಭರತ ಬೊಮ್ಮಾಯಿ, ಸುಭಾಸ ಮಾಳಗಿ, ವೀರೇಂದ್ರ ಶೆಟ್ಟರ, ಶಂಕರಗೌಡ್ರ ಬುಡಪನಹಳ್ಳಿ, ಶಿವಾನಂದ ಯಮನಕ್ಕನವರ, ಶಿವಯೋಗಿ ಶಿರೂರು, ಹಾಲೇಜ ಜಾಧವ, ವೈ.ಎಚ್. ಕುಡುಪಲಿ, ಶಿವಯೋಗಿ ಉಕ್ಕುಂದ, ಸರೋಜ ಉಳ್ಳಾಗಡ್ಡಿ, ವಿದ್ಯಾಶೆಟ್ಟಿ, ಕವಿತಾ ಸೊಪ್ಪಿನಮಠ, ಕಲಾವತಿ ಬಡಿಗೇರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net