ಹಣ ಡಬಲ್ ಪಡೆಯಿರಿ ಎಂದು 3.60 ಲಕ್ಷ ರೂ. ವಂಚನೆ

Crime
Crime
Published on

ಹಿರೇಕೆರೂರ: ಹಣ ಡಬಲ್ ಪಡೆಯಿರಿ ಎಂದು ನಂಬಿಸಿ ವ್ಯಕ್ತಿಯೊಬ್ಬರಿಗೆ 3.60 ಲಕ್ಷ ರೂ. ವಂಚಿಸಿರುವ ಕುರಿತು ಇಲ್ಲಿಯ ಹಿರೇಕೆರೂರ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.

ಇಲ್ಲಿಯ ವಿದ್ಯಾ ನಗರದ ಬಟ್ಟೆ ಅಂಗಡಿ ವ್ಯಾಪಾರಿ ಶೋಭರಾಮ ಹೇಮರಾಮಜಿ ಎಂಬುವರಿಗೆ ಮೋಸ ಮಾಡಿರುವುದು.

ಇವರಿಗೆ ಮಹಾವೀರ್ ಮೀನಾ ಎಂಬುವನು ಟೆಲಿಗ್ರಾಮ್ ಅಕೌಂಟ್ಗೆ ಲಿಂಕ್ವೊಂದನ್ನು ಕಳುಹಿಸಿ ಅದರ ಮೂಲಕ ಹಣ ಡಬಲ್ ಮಾಡಿಕೊಡುವ ಭರವಸೆ ನೀಡಿ 3.60 ಲಕ್ಷ ರೂ. ಹಾಕಿಸಿಕೊಂಡು ವಂಚಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net