empty hand ದೆಹಲಿಯಿಂದ ಬರಿಗೈಲಿ ವಾಪಸ್ ಆದ ಮಾನೆ

ಶ್ರೀನಿವಾಸ ಮಾನೆ ಶಾಸಕ
ಶ್ರೀನಿವಾಸ ಮಾನೆ ಶಾಸಕ
Published on

ಹಾನಗಲ್ಲ:

ಸಂಪುಟ ವಿಸ್ತರಣೆಯಲ್ಲಿ

ಹಾನಗಲ್ಲ

ಶಾಸಕ ಶ್ರೀನಿವಾಸ ಮಾನೆ ಅವರಿಗೆ ಸಚಿವ ಸ್ಥಾನ ಕೈತಪ್ಪಿದ್ದು, ದೆಹಲಿಯಿಂದ ಬರಿಗೈಲಿ ವಾಪಸ್ (empty hand) ಆಗಿದ್ದಾರೆ.

ಒಂದೆರಡು ತಿಂಗಳಿನಿಂದ ಶಾಸಕ ಶ್ರೀನಿವಾಸ ಮಾನೆ ಅವರು ದೆಹಲಿಯಲ್ಲಿ ಹೈಕಮಾಂಡ್ ಹಾಗೂ ತಮ್ಮ ಹಿರಿಯ ಆಪ್ತರನ್ನು ಸಂರ್ಪಸಿ ಸಚಿವ ಸ್ಥಾನಕ್ಕೆ ಲಾಬಿ ಮಾಡಿದ್ದರು. ಹೀಗಾಗಿ, ಕಳೆದ ಎರಡು ತಿಂಗಳಿನಿಂದ ಕಾರ್ಯಕರ್ತರಲ್ಲಿ ವಲಯದಲ್ಲಿ ಶ್ರೀನಿವಾಸ ಮಾನೆ ಅವರಿಗೆ ಸಚಿವ ಸ್ಥಾನ ಪಕ್ಕಾ ಎಂಬ ಚರ್ಚೆ ನಡೆಯುತ್ತಲೇ ಇತ್ತು. ಆದರೆ, ಆ. 3ರಂದು ಬೆಳಗ್ಗೆ ಹೈಕಮಾಂಡ್ ಪ್ರಕಟಿಸಿದ ನಿಯೋಜಿತ ಸಚಿವರ ಪಟ್ಟಿಯಲ್ಲಿ ಶ್ರೀನಿವಾಸ ಮಾನೆ ಅವರ ಹೆಸರು ಕೈಬಿಡಲಾಗಿತ್ತು. ಇದು ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಭಾರಿ ಅಸಮಾಧಾನ ಉಂಟು ಮಾಡಿದೆ.
ವಿಧಾನ ಪರಿಷತ್ ಸದಸ್ಯರಾಗಿ ಹಾನಗಲ್ಲ ಕ್ಷೇತ್ರ ಕಾರ್ಯಕ್ಷೇತ್ರವಾಗಿ ಮಾಡಿಕೊಂಡಿದ್ದ ಶ್ರೀನಿವಾಸ ಮಾನೆ ಅವರು ಇಲ್ಲಿನ ಶಾಸಕರಾಗುವ ಕನಸು ಕಂಡಿದ್ದರು. ಉಪ ಚುನಾವಣೆ ಮೂಲಕ ಶಾಸಕರಾದ ಅವರು, ಮತ್ತೆ ಪುನರಾಯ್ಕೆಯಾಗಿದ್ದರು. ಆದರೆ, ಸಚಿವರಾಗುವ ಅವಕಾಶ ಕೈತಪ್ಪಿರುವುದಕ್ಕೆ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಬೇಸರ ಹೊರಹಾಕುತ್ತಿದ್ದಾರೆ. ಸಚಿವ ಸ್ಥಾನದ ನಿರೀಕ್ಷೆ ಹುಸಿಯಾಗಿರುವುದರಿಂದ ಬಹುತೇಕ ಕಾರ್ಯಕರ್ತರು ಮೌನಕ್ಕೆ ಶರಣಾಗಿದ್ದಾರೆ. ಕೆಲ ಸ್ಥಳೀಯ ನಾಯಕರು ತಮ್ಮ ಪಕ್ಷದ ಹಾಗೂ ಸರ್ಕಾರದ ಹುದ್ದೆಗಳಿಗೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಹನುಮಂತಪ್ಪ ಮರಗಡಿ ಪ್ರತಿಕ್ರಿಯಿಸಿ, ನಮ್ಮ ನಾಯಕ ಶ್ರೀನಿವಾಸ ಮಾನೆ ಅವರಿಗೆ ಸಚಿವ ಸ್ಥಾನ ಸಿಗದಿರುವುದು ತುಂಬ ಬೇಸರದ ಸಂಗತಿ. ಈಗ ನಾವು ಮೌನವಾಗಿದ್ದೇವೆ. ಮಾನೆ ಅವರು ಕ್ಷೇತ್ರಕ್ಕೆ ಬಂದ ನಂತರ ಕಾರ್ಯಕರ್ತರೆಲ್ಲ ಒಟ್ಟಾಗಿ ಕುಳಿತು ಮುಂದೇನು ಎಂಬ ಬಗ್ಗೆ ತೀರ್ವನಿಸುತ್ತೇವೆ ಎಂದಿದ್ದಾರೆ.

"

ಹಾನಗಲ್ಲ ತಾಲೂಕಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ. ಶಾಸಕ ಮಾನೆ ಅವರು ಪಕ್ಷಕ್ಕೆ ನೀಡಿದ ಕೊಡುಗೆ ಬಗ್ಗೆ ಹೈಕಮಾಂಡ್ ಪರಿಗಣಿಸಬೇಕಿತ್ತು. ಈ ಬಾರಿ ಸಚಿವ ಸ್ಥಾನ ಸಿಗುತ್ತದೆ ಎಂಬ ಪೂರ್ಣ ವಿಶ್ವಾಸ ನಮಗಿತ್ತು. ನಾವು ಪಕ್ಷದ ಜವಾಬ್ದಾರಿಯುತ ಕಾರ್ಯಕರ್ತರು ನಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡುವ ನಿರ್ಧಾರದಲ್ಲಿದ್ದೇವೆ.

| ಟಾಕನಗೌಡ ಪಾಟೀಲ, ಕೆಪಿಸಿಸಿ ಸದಸ್ಯ.

"

ಹಾವೇರಿಗೆ ಸಚಿವ ಸ್ಥಾನ ದೊರೆಯಬೇಕೆಂಬ ನಮ್ಮ ಅಪೇಕ್ಷೆ ಈಡೇರಿದೆ. ಜಿಲ್ಲೆಯ ಅಭಿವೃದ್ಧಿಗೆ ನಮ್ಮ ಕಾರ್ಯಕರ್ತರನ್ನೊಳಗೊಂಡು ಎಲ್ಲ ಸಹಕಾರ ನೀಡುತ್ತೇವೆ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಹೈಕಮಾಂಡ್ ನಿರ್ಣಯಕ್ಕೆ ನಾನು ಬದ್ಧ.

| ಶ್ರೀನಿವಾಸ ಮಾನೆ ಶಾಸಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net