ನಿಲ್ದಾಣದಲ್ಲಿ ಬಸ್ ಹಾಯ್ದು ಸಾವು- Death by bus

Death by bus
Published on
ಹಿರೇಕೆರೂರ: ಊರಿಗೆ ತೆರಳಲು ಬಸ್ ಕಾಯುತ್ತಿದ್ದ ವ್ಯಕ್ತಿಯ ಮೇಲೆ ಬಸ್ ಹಾಯ್ದು (Death by bus) ಸಾವನ್ನಪ್ಪಿದ ಘಟನೆ ಪಟ್ಟಣದ ಬಸ್ ನಿಲ್ದಾಣದಲ್ಲಿ ಮಂಗಳವಾರ ಸಂಭವಿಸಿದೆ.
ರಟ್ಟಿಹಳ್ಳಿ ತಾಲೂಕಿನ ಇಂಗಳಗೊಂದಿ ಗ್ರಾಮದ ಬಾಷಾಸಾಬ್ ಹುಸೇನಸಾಬ್ ಬೆಳವಿಗಿ (63) ಮೃತ ದುರ್ದೈವಿ.
ಪಟ್ಟಣದ ಬಸ್ ನಿಲ್ದಾಣದಲ್ಲಿ ಊರಿಗೆ ತೆರಳಲು ಮಂಗಳವಾರ ಬೆಳಗ್ಗೆ 9.15 ಗಂಟೆ ಸುಮಾರಿಗೆ ಬಸ್​ಗೆ ಬಾಷಾಸಾಬ್ ಕಾಯುತ್ತಿದ್ದರು. ಆಗ ಅಲ್ಲಿಯೇ ನಿಲ್ಲಿಸಿದ್ದ ಬಸ್​ವೊಂದು ಏಕಾಎಕಿ ಮುಂದಕ್ಕೆ ಸಾಗಿ ಬಾಷಾಸಾಬ್ ಮೇಲೆ ಹಾಯ್ದಿದೆ. ಬಸ್ ಮುಂಭಾಗದ ಮತ್ತು ಹಿಂಬದಿ ಚಕ್ರಗಳು ಬಾಷಾಸಾಬ್ ಸೊಂಟದ ಮೇಲೆ ಹರಿದಿದೆ.
ಜನರು ಕೂಗಾಡಿದ್ದರಿಂದ ತಕ್ಷಣ ಸ್ಥಳಕ್ಕೆ ಧಾವಿಸಿದ ಚಾಲಕ, ಬಸ್ ಅನ್ನು ಬ್ರೇಕ್ ಹಾಕಿ ನಿಲ್ಲಿಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಬಾಷಾಸಾಬ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಈ ಸಂಬಂಧ ಹಿರೇಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net