ಕೆಲಸಕ್ಕೆಂದು ಬಂದ ಯುವಕನಿಂದ ಯುವತಿ ಅಪಹರಣ; ಲವ್ ಜಿಹಾದ್ ಶಂಕೆ

Crime
Crime
Published on

ಹಿರೇಕೆರೂರ: ತಾಲೂಕಿನ ಮಡ್ಲೂರು ಗ್ರಾಮದಲ್ಲಿ ಮನೆ ಕೆಲಸಕ್ಕೆಂದು ಬಂದಿದ್ದ ಮುಸ್ಲಿಂ ಯುವಕನೊಬ್ಬ ಅದೇ ಮನೆಯ ಹಿಂದೂ ಯುವತಿಯೊಬ್ಬಳನ್ನು ಪುಸಲಾಯಿಸಿ ಕರೆದುಕೊಂಡು ಹೋಗಿದ್ದು, ಲವ್ ಜಿಹಾದ್ ಶಂಕೆ ವ್ಯಕ್ತವಾಗಿದೆ.

ಹಾವೇರಿ ತಾಲೂಕಿನ ಕಬ್ಬೂರ ಗ್ರಾಮದ ಮಲ್ಲಿಕರೇಹಾನ ಚಮನಸಾಬ ಹಮ್ಮಗಿ ಯುವತಿಯನ್ನು ಕರೆದುಕೊಂಡು ಯುವಕ ಎನ್ನಲಾಗಿದೆ.

ಈ ಕುರಿತು ಯುವತಿಯ ಸಹೋದರ ಪೊಲೀಸರಿಗೆ ದೂರು ನೀಡಿದ್ದು, ಈತ ಮನೆ ಕೆಲಸಕ್ಕೆಂದು ಬಂದಿದ್ದ. ನನ್ನ ಸಹೋದರಿ ತಿಳವಳ್ಳಿಗೆ ಕೆಲಸಕ್ಕೆಂದು ಹೋದಾಗ ಆಕೆಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿದ್ದಾನೆ. ಆದ್ದರಿಂದ ಕೂಡಲೇ ಆಕೆಯನ್ನು ಪತ್ತೆ ಮಾಡಿಕೊಡಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾನೆ. ಈ ಕುರಿತು ಹಿರೇಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net