ಮೊಬೈಲ್ ಮರಳಿಸಿ ಪ್ರಾಮಾಣಿಕತೆ ಮೆರೆದ ನಿರ್ವಾಹಕಿ

Ranebennur
Ranebennur
Published on

ರಾಣೆಬೆನ್ನೂರ: ಬಸ್ನಲ್ಲಿ ದೊರೆತಿದ್ದ ಮೊಬೈಲ್ಅನ್ನು ಕಳೆದುಕೊಂಡ ಮಹಿಳೆಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಟನೆ ತಾಲೂಕಿನ ಗುಡಿಹೊನ್ನತ್ತಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಕೆಂಚವ್ವ ಹರಿಜನ ಎಂಬ ಮಹಿಳೆ ಹೊನ್ನತ್ತಿಗೆ ಹೋಗುವ ಸಲುವಾಗಿ ರಾಣೆಬೆನ್ನೂರ ನಗರದಿಂದ ಬಸ್ ಹತ್ತಿದ್ದರು. ಹೊನ್ನತ್ತಿ ಬಂದಾಗ ಬಸ್ ಇಳಿದಿದ್ದಾರೆ. ಆಗ ಮೊಬೈಲ್ ಬಸ್ನಲ್ಲಿಯೆ ಬಿದ್ದಿತ್ತು. ಮೊಬೈಲ್ ಬಸ್ನ ನಿರ್ವಾಹಕಿ ವನಜಾ ಎಂಬುವರಿಗೆ ದೊರೆತಿದೆ. ಕೆಂಚವ್ವ ಹೊನ್ನತ್ತಿ ದೇವಸ್ಥಾನಕ್ಕೆ ಹೋಗಿ ವಾಪಸ್ ಬರುವಾಗ ಮೊಬೈಲ್ ಇಲ್ಲದಿರುವುದನ್ನು ಕಂಡು ತಾನು ಹತ್ತಿದ ಬಸ್ ಬರುವಿಕೆಗಾಗಿ ಕಾಯ್ದು ನಿಂತಿದ್ದರು. ಬಸ್ ಬಂದಾಗ ಮೊಬೈಲ್ ಕಳೆದುಕೊಂಡ ವಿಚಾರ ಹೇಳಿದ್ದಾಳೆ. ನಿರ್ವಾಹಕಿ ಆಕೆಗೆ ಮೊಬೈಲ್ ಕೊಟ್ಟು ಪ್ರಾಮಾಣಿಕತೆ ಮೆರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net