

ಸವಣೂರ: ಮೆಕ್ಕೆಜೋಳ ಲೋಡ್ ಮಾಡುತ್ತಿದ್ದ ಲಾರಿಯಿಂದ ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟ ಟನೆ ತಾಲೂಕಿನ ಮೆಳ್ಳಾಗಟ್ಟಿ ಪ್ಲಾಟ್ನಲ್ಲಿ ಗುರುವಾರ ನಡೆದಿದೆ.
ಶಿಗ್ಗಾಂವಿ ತಾಲೂಕಿನ ನೀರಲಕಟ್ಟಿ ಗ್ರಾಮದ ಕೃಷ್ಣಪ್ಪ ಕ್ಕೀರಪ್ಪ ಲಕ್ಕಿಕೊಪ್ಪ (44) ಮೃತ ವ್ಯಕ್ತಿ.
ಈತ ಮೆಕ್ಕೆಜೋಳವನ್ನು ಲಾರಿಗೆ ಲೋಡ್ ಮಾಡುತ್ತಿದ್ದ ಸಮಯದಲ್ಲಿ ಲಾರಿ ಚಾಲಕ ಏಕಾಏಕಿ ಲಾರಿಯನ್ನು ಮುಂದೆ ತೆಗೆದುಕೊಂಡಿದ್ದರಿಂದ ಕೃಷ್ಣಪ್ಪ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ. ಈ ಕುರಿತು ಸವಣೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.