

ಹಾವೇರಿ: ಯಾವುದೋ ವಿಷಯಕ್ಕೆ ಮಾನಸಿಕ ಮಾಡಿಕೊಂಡ ವೃದ್ಧರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿಯ ಖಾಸಗಿ ಲಾಡ್ಜ್ವೊಂದರಲ್ಲಿ ನಡೆದಿದೆ.
ಧಾರವಾಡದ ಸಮಾಪುರ ರಸ್ತೆಯ ಮಂಜುನಾಥ ಮಲ್ಲಪ್ಪ ಕುರಡೂರ (67) ಮೃತ ವೃದ್ಧ.
ಈತ ಧಾರವಾಡದಿಂದ ಬಂದು ನಗರದ ಲಾಡ್ಜ್ವೊಂದರಲ್ಲಿ ರೂಮ್ ಮಾಡಿಕೊಂಡಿದ್ದ. ಸಂಜೆ ಸಮಯಕ್ಕೆ ನೇಣು ಬಿಗಿದುಕೊಂಡಿದ್ದಾನೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.