ಸಿಡಿಲು ಬಡಿದ ಮರದ ಕೆಳಗೆ ನಿಂತಿದ್ದ ಯುವಕ ಸಾವು

Crime
Crime
Published on

ರಾಣೆಬೆನ್ನೂರ: ಸಿಡಿಲು ಬಡಿದ ತೆಂಗಿನಮರದ ಬಳಿ ನಿಂತಿದ್ದ ಯುವಕನೊಬ್ಬ ಎದೆನೋವಿನಿಂದ ಮೃತಪಟ್ಟ ಘಟನೆ ತಾಲೂಕಿನ ಸುಣ್ಣಕಲ್ಲಬಿದರಿ ಗ್ರಾಮದಲ್ಲಿ ನಡೆದಿದೆ.

ಗಿರೀಶ ಕರಿಯಾಲ್ಲಪ್ಪ ನೋಟದ (೨೦) ಮೃತ ಯುವಕ.

ಈತ ಮಳೆ ಬರುವ ಸಮಯದಲ್ಲಿ ತಮ್ಮ‌ಜಮೀನಿನ ತೆಂಗಿನಮರದ ಬಳಿ ನಿಂತಿದ್ದ. ಈ ಸಮಯದಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದಿದೆ. ಸಿಡಿಲಿನ ರಭಸಕ್ಕೆ ಗಿರೀಶ ಎದೆನೋವು ಬಂದು ಮೃತಪಟ್ಟಿದ್ದಾನೆ. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net