ಪರವಾನಗಿ ನವೀಕರಣ ಮಾಡಿಕೊಳ್ಳದ ಅಂಗಡಿಗೆ ಬೀಗ ಮುದ್ರೆ

ಅಂಗಡಿಗೆ ಬೀಗ
ಅಂಗಡಿಗೆ ಬೀಗ
Published on

ರಾಣೆಬೆನ್ನೂರು: ಪರವಾನಗಿ ನವೀಕರಣ ಮಾಡದೆ ಬೀಜ ಮಾರಾಟಕ್ಕೆ ಮುಂದಾಗ ನಗರದ ಬೀಜದಗಂಡಿ ಮಳಿಗೆಗೆ ಕೃಷಿ ಅಧಿಕಾರಿಗಳು ಬೀಗ ಮುದ್ರೆ ಹಾಕಿದ್ದಾರೆ.

ನಗರದ ಬಸ್ ನಿಲ್ದಾಣದ ವೃತ್ತದ ಬಳಿಯಿರುವ ಮಂಗಳಾ ಸೀಡ್ಸ್ಗೆ ಬೀಗ ಹಾಕಿರುವುದು.

ಇವರು ಕೃಷಿ ಇಲಾಖೆಯಿಂದ ಬೀಜ ಮಾರಾಟದ ಕುರಿತು ಪರವಾನಗಿ ನವೀಕರಣ ಮಾಡಿಕೊಂಡಿರಲಿಲ್ಲ. ಆದರೆ, ರೈತರಿಗೆ ಬೀಜ ಮಾರಾಟ ಮಾಡಲು ಮುಂದಾಗಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಹಾಯಕ ಕೃಷಿ ನಿರ್ದೇಶಕಿ ಶಾಂತಮಣಿ ಜಿ. ಹಾಗೂ ತಂಡದವರು ಮಳಿಗೆಗೆ ಬೀಗ ಮುದ್ರೆ ಹಾಕಿದ್ದಾರೆ.

ಅಧಿಕಾರಿಗಳ ಎದುರು ಹೈಡ್ರಾಮಾ...

ಕೃಷಿ ಅಧಿಕಾರಿಗಳು ಅಂಗಡಿಗೆ ಬೀಗ ಮುದ್ರೆ ಹಾಕಲು ಬಂದಾಗ ಅಂಗಡಿಯಲ್ಲಿದ್ದ ವ್ಯಕ್ತಿ ಚಾಕೂ ತೆಗೆದುಕೊಂಡು ಅಂಗಡಿಗೆ ಬೀಗ ಹಾಕಿದರೆ, ಕೈ ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನಾಟಕ ಮಾಡಿದ್ದಾನೆ. ಇದರಿಂದ ಆತಂಕಗೊಂಡ ಕೃಷಿ ಅಧಿಕಾರಿಗಳು ಪೊಲೀಸರ ಸಹಕಾರ ಪಡೆದುಕೊಂಡು ಅಂಗಡಿಗೆ ಬೀಗ ಹಾಕಿದ್ದಾರೆ. ಹೈ ಡ್ರಾಮಾ ಮಾಡಿದ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕಿ ಶಾಂತಮಣಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net