ನೋಂದಣಿ ಮತ್ತು ಮುಂದ್ರಾಕ ಪತ್ರ ಬಹರಗಾರರ ಪ್ರತಿಭಟನೆ 25ರಂದು

ಸುದ್ದಿಗೋಷ್ಠಿ
ಸುದ್ದಿಗೋಷ್ಠಿ
Published on

ರಾಣೆಬೆನ್ನೂರು: ಸರ್ಕಾರ ಕಾವೇರಿ ತತ್ರಾಂಶದ ಮೂಲಕ ಪೇಪರ್ ಲೆಸ್ ಡಿಜಿಟಲ್ ನೋಂದಣಿ ಜಾರಿಗೆ ತಂದಿದ್ದು, ಇದರಿಂದ ಸಾರ್ವಜನಿಕರ ಆಸ್ತಿ ದಾಖಲಾತಿಗೆ ಭದ್ರತೆ ಇಲ್ಲದಂತಾಗಿದೆ. ಇದನ್ನು ಖಂಡಿಸಿ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಪರವಾನಗಿ ಪಡೆದ(ದಸ್ತು)ಪತ್ರ ಬರಹಗಾರರ ಒಕ್ಕೂಟದಿಂದ ಮೇ 25ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಉಪಾಧ್ಯಕ್ಷ ನವೀನಕುಮಾರ ಎನ್. ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಪ್ರೀಲ್ 30ರಂದು ಚಾಮರಾಜನಗರ ಜಿಲ್ಲೆಯಲ್ಲಿ ಜಾರಿಗೆ ತಂದಿರುವ ಈ ಯೋಜನೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತ್ತಿದೆ. ಆಸ್ತಿ ನೋಂದಣಿ ಆಗಿರುವ ಬಗ್ಗೆ ಯಾವುದೇ ಬೌತಿಕ ಪತ್ರಗಳನ್ನು ಖರೀದಿದಾರರಿಗೆ ನೀಡದೆ ಇರುವುದರಿಂದ ಹಾಗೂ ಡಿಜಿಟಲ್ ಲಾಕರ್ನಲ್ಲಿ ಸೇವ್ ಆಗುವುದರಿಂದ ಆಸ್ತಿ ಖರೀದಿದಾರರಿಗೆ ಯಾವುದೇ ನಿಖರವಾದ ಪತ್ರಗಳು, ದಾಖಲೆಗಳು ಸಿಗುವುದಿಲ್ಲ. ಪತ್ರಗಳು ಸಿಗದೆ ಇರುವುದರಿಂದ ಮುಂದೆ ಅವರ ವಾರಸುದಾರರಿಗೆ ಸಹ ಆಸ್ತಿ ಖರೀದಿಸಿರುವ ಬಗ್ಗೆ ಮಾಹಿತಿ ಇರುವುದಿಲ್ಲ ಎಂದರು.

ಈ ಪೇಪರಲೆಸ್ ನೋಂದಣಿ ಪ್ರಕ್ರಿಯೆಯಲ್ಲಿ ದಸ್ತಾವೇಜು ತಯಾರಿಸುವವರ ಭೌತಿಕ ರುಜು ಅಥವಾ ಡಿಜಿಟಲ್ ಸಹಿಗೆ ಅವಕಾಶ ಮಾಡಿಕೊಟ್ಟಿರುವುದಿಲ್ಲ. ಇದರಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ಕಾನೂನು ಸಲಹೆಗಾರರು ಇಲ್ಲದಂತೆ ಮಾಡಿರುತ್ತಾರೆ. ಪೇಪರಲೆಸ್ ನೋಂದಣಿ ಪ್ರಕ್ರಿಯೆ ಸಂರ್ಪೂಣ ಅವೈಜ್ಞಾನಿಕ ರೀತಿಯಲ್ಲಿ ಜಾರಿಗೆ ತಂದಿರುತ್ತಾರೆ. ಈ ಪೇಪರ್ಲೆಸ್ ನೋಂದಣಿ ವ್ಯವಸ್ಥೆಯಿಂದ ಭೂ ಮಾಫಿಯಾ ಜನರಿಗೆ ಸರ್ಕಾರವೇ ಅನುಕೂಲ ಮಾಡಿಕೊಟ್ಟಂತೆ ಆಗುತ್ತದೆ ಎಂದರು.

ಮೂಲಪತ್ರಗಳು ಖರೀದಿದಾರರಿಗೆ ಸಿಗದೆ ಇರುವುದರಿಂದ ಅವರು, ಅವರ ಸ್ವತ್ತಿನ ಪತ್ರಗಳನ್ನು ಬ್ಯಾಂಕ್ನಲ್ಲಿ ಅಡವು ಮಾಡಿ ಸಾಲ ಸೌಲಭ್ಯ ಪಡೆಯಲು ಅನಾನುಕೂಲವಾಗಿರುತ್ತದೆ. ದಾಖಲೆಗಳ ಅಡಮಾನ ಪತ್ರ ಕಲಂನ ಅಸ್ತಿತ್ವಕ್ಕೆ ಪೇಪರಲೆಸ್ ಡಿಜಿಟಲ್ ನೋಂದಣಿ ವ್ಯವಸ್ಥೆಯೂ ವಿರುದ್ಧವಾಗಿದೆ. ಆದ್ದರಿಂದ ಈ ವ್ಯವಸ್ಥೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಒಕ್ಕೂಟದ ಅಧ್ಯಕ್ಷ ಡಿ.ಕೆ. ಸಂಗಮೇಶ ಎಲಿಗಾರ, ಉಪಾಧ್ಯಕ್ಷ ಬಸವರಾಜ ಲೆ$್ಮಶ್ವರ, ಜಿ.ಎಂ. ಸುರೇಶಬಾಬು, ಸಹ ಕಾರ್ಯದಶಿರ್ ಕರಿಬಸಪ್ಪ ಬಳ್ಳಿ, ಕೃಷ್ಣಮೂತಿರ್, ಡಿ.ಆರ್. ಗಿರಿರಾಜು, ಶಿವಪುತ್ರಪ್ಪ ಸಪಗಾಯಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net