ಮಹಿಳೆಯರ ವ್ಯಕ್ತಿತ್ವದಲ್ಲೂ ಬದಲಾಗಲಿ

ಬೊಮ್ಮನಹಳ್ಳಿ ಗ್ರಾಮದ ಅಕ್ಕಮಹಾದೇವಿ ಮಹಿಳಾ ಮಂಡಳ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನ ಆಚರಿಸಲಾಯಿತು. ಡಾ. ಪುಷ್ಪವತಿ ಶೆಲುವಾಡಿಮಠ, ವೈದ್ಯೆ ಸ್ವರೂಪಿಣಿ ಟಿ. ರಾಥೋಡ ಇತರರಿದ್ದರು.
ಬೊಮ್ಮನಹಳ್ಳಿ ಗ್ರಾಮದ ಅಕ್ಕಮಹಾದೇವಿ ಮಹಿಳಾ ಮಂಡಳ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನ ಆಚರಿಸಲಾಯಿತು. ಡಾ. ಪುಷ್ಪವತಿ ಶೆಲುವಾಡಿಮಠ, ವೈದ್ಯೆ ಸ್ವರೂಪಿಣಿ ಟಿ. ರಾಥೋಡ ಇತರರಿದ್ದರು.
Published on
ಬೊಮ್ಮನಹಳ್ಳಿ: ಮಹಿಳಾ ಸಬಲೀಕರಣದಿಂದ ಸದೃಢ ಸಮಾಜ ನಿರ್ಮಾಣವಾಗುತ್ತದೆ ಎಂದು ಉಪನ್ಯಾಸಕಿ ಡಾ. ಪುಷ್ಪವತಿ ಶೆಲುವಾಡಿಮಠ ಹೇಳಿದರು.
ಗ್ರಾಮದ ಅಕ್ಕಮಹಾದೇವಿ ಮಹಿಳಾ ಮಂಡಳದಿಂದ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ವೈದ್ಯೆ ಸ್ವರೂಪಿಣಿ ಟಿ. ರಾಥೋಡ ಮಾತನಾಡಿ, ಮಹಿಳೆ ಎಲ್ಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಹೆಣ್ಣು ವೇಷಭೂಷಣದಲ್ಲಿ ಬದಲಾದರೆ ಸಾಲದು, ವ್ಯಕ್ತಿತ್ವದಲ್ಲೂ ಬದಲಾಗಬೇಕು ಎಂದು ತಿಳಿಸಿದರು.
ಪ್ರತಿಯೊಬ್ಬ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು ಎಂದರು. ಮಹಿಳಾ ಮಂಡಳದ ಅಧ್ಯಕ್ಷೆ ಅಕ್ಕಮಹಾದೇವಿ ನೆಲವಿಗಿ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷೆ ಶೀಲಾ ಸುಕಾಲಿ, ರೇಖಾ ಮಲ್ಲಮ್ಮನವರ, ಕಸ್ತೂರಮ್ಮ ಅಂಗಡಿ ಇತರರಿದ್ದರು. ಲಕ್ಷ್ಮೀ ಪಾಟೀಲ್, ಶೈಲಾ ಹುಲ್ಮನಿ, ರೇಖಾ ಪೂಜಾರ, ಲಕ್ಷ್ಮೀ ಚಕ್ರಸಾಲಿ, ನೇತ್ರ ಕ್ಯಾಲಕೊಂಡ ಹಾಗೂ ಅನಿತಾ ಕೂಡಲಮಠ ಹಾಗೂ ಅನ್ನಪೂರ್ಣಾ ಹೊಳಲದ ಕಾರ್ಯಕ್ರಮ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net