Land guarantee ಭೂ ಗ್ಯಾರಂಟಿ ಬಡವರಿಗೆ ವರದಾನ

ಹಾನಗಲ್ಲ ತಾಲೂಕಿನ ಹುಲಗಿನಹಳ್ಳಿ ಗ್ರಾಮದಲ್ಲಿ ಭೂ ಗ್ಯಾರಂಟಿ (Land guarantee) ಕಾರ್ಯಕ್ರಮದಡಿ ಲಾನುಭವಿಗಳಿಗೆ ಶಾಸಕ ಶ್ರೀನಿವಾಸ ಮಾನೆ ಹಕ್ಕುಪತ್ರ ವಿತರಿಸಿದರು.
ಹಾನಗಲ್ಲ ತಾಲೂಕಿನ ಹುಲಗಿನಹಳ್ಳಿ ಗ್ರಾಮದಲ್ಲಿ ಭೂ ಗ್ಯಾರಂಟಿ (Land guarantee) ಕಾರ್ಯಕ್ರಮದಡಿ ಲಾನುಭವಿಗಳಿಗೆ ಶಾಸಕ ಶ್ರೀನಿವಾಸ ಮಾನೆ ಹಕ್ಕುಪತ್ರ ವಿತರಿಸಿದರು.
Published on
ಹಾನಗಲ್ಲ: ಅತಂತ್ರ ಮತ್ತು ಆತಂಕದಲ್ಲಿ ಬದುಕುತ್ತಿದ್ದ ಸಾವಿರಾರು ಕುಟುಂಬಗಳಿಗೆ ಭೂ ಗ್ಯಾರಂಟಿ Land guarantee ಕಾರ್ಯಕ್ರಮದಡಿ ಹಕ್ಕುಪತ್ರ ಒದಗಿಸಿ ಸ್ವತಂತ್ರಗೊಳಿಸಲಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ತಾಲೂಕಿನ ಹುಲಗಿನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಭೂ ಗ್ಯಾರಂಟಿ ಕಾರ್ಯಕ್ರಮದಡಿ 77 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.
ಮಾಜಿ ಸಚಿವ ಬಿ.ಸಿ. ಪಾಟೀಲ, ಮಾಜಿ ಶಾಸಕರಾದ ಶಿವರಾಜ ಸಜ್ಜನರ ಮತ್ತು ಅರುಣಕುಮಾರ ಪೂಜಾರ ಅವರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಹಕ್ಕುಪತ್ರದ ಅವಶ್ಯಕತೆ ಇಲ್ಲ. ಇದೊಂದು ಬೋಗಸ್​ ಕಾರ್ಯಕ್ರಮ ಎಂದೆಲ್ಲ ಆರೋಪಿಸುತ್ತಿದ್ದಾರೆ. ಇವರಿಗೆಲ್ಲರಿಗೂ ಹುಲಗಿನಹಳ್ಳಿಗೆ ಹಾರ ಹಾಕಿ ಸ್ವಾಗತಿಸೋಣ.
ಇಲ್ಲಿಗೆ ಬಂದು ಅವರೆಲ್ಲ ಹಕ್ಕುಪತ್ರ ಪಡೆದ ಕುಟುಂಬಗಳನ್ನು ಭೇಟಿ ಮಾಡಲಿ. ಲಾನುಭವಿಗಳನ್ನು ಮಾತನಾಡಿಸಿ, ದಾಖಲೆಗಳನ್ನು ಪರಿಶೀಲಿಸಿ ನಿಜ ಸಂಗತಿ ಅರಿಯಲಿ. ತಾವು ಅಧಿಕಾರದಲ್ಲಿ ಇದ್ದಾಗ ಇಂಥ ಕೆಲಸ ಮಾಡಿದ್ದರೆ ಹೇಳಲಿ ಎಂದರು.
ಹಾನಗಲ್ಲ ತಾಲೂಕು ಒಂದರಲ್ಲಿಯೇ 13 ಸಾವಿರಕ್ಕಿಂತ ಹೆಚ್ಚು ಕುಟುಂಬಗಳು ದಾಖಲೆ ರಹಿತವಾಗಿ ಸರ್ಕಾರಿ ಮತ್ತು ಖಾಸಗಿ ಜಮೀನಿನಲ್ಲಿ ಮನೆ ಕಟ್ಟಿಕೊಂಡು ಅತಂತ್ರವಾಗಿ ವಾಸಿಸುತ್ತಿದ್ದವು. ಅತಂತ್ರ ಸ್ಥಿತಿಯಲ್ಲಿದ್ದ ಕುಟುಂಬಗಳಿಗೆ ಮನೆ ಮಾಲೀಕತ್ವ ದೊರಕಿಸುವ ಭರವಸೆಯನ್ನು ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನೀಡಲಾಗಿತ್ತು. ಇದೀಗ ನುಡಿದಂತೆ ನಡೆದು ಹಕ್ಕುಪತ್ರ, ನೋಂದಣಿ ಪತ್ರ, ಇ ಸ್ವತ್ತು ವಿತರಿಸಲಾಗಿದೆ ಎಂದರು.
ತಹಸೀಲ್ದಾರ್​ ಎಸ್​.ರೇಣುಕಾ ಮಾತನಾಡಿ, ಹಕ್ಕುಪತ್ರ ವಿತರಿಸುವ ಕಾರ್ಯದಲ್ಲಿ ಹಾನಗಲ್ಲ ತಾಲೂಕು ಇಡೀ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ. 7,747 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲು ಸರ್ಕಾರ ಅನುಮೋದನೆ ನೀಡಿದೆ. ಪಟ್ಟಿಯಲ್ಲಿ ಬಿಟ್ಟು ಹೋಗಿರುವ ಮತ್ತಷ್ಟು ಕುಟುಂಬಗಳನ್ನು ಪಟ್ಟಿಯಲ್ಲಿ ಸೇರಿಸಲಾಗುವುದು ಎಂದರು. ಕಂದಾಯ ಇಲಾಖೆಯ ಅಧಿಕಾರಿಗಳು, ಗ್ರಾಮಸ್ಥರು, ಮುಖಂಡರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net