

ರಟ್ಟಿಹಳ್ಳಿ: ಜಮೀನಿನ ದನದ ಕೊಟ್ಟಿಗೆಯಲ್ಲಿ ಕಟ್ಟಿದ ಎರಡು ಆಕಳುಗಳನ್ನು ಯಾರೋ ಕಳ್ಳತನ ಮಾಡಿಕೊಂಡು ಹೋದ ಘಟನೆ ತಾಲೂಕಿನ ಹಳ್ಳೂರ ಗ್ರಾಮದಲ್ಲಿ ನಡೆದಿದೆ.
ಗೋವಿಂದ ಶಿವಪ್ಪ ವಸನದ (38) ಎಂಬುವರ ಆಕಳು ಕಳ್ಳತನ ಆಗಿರುವುದು.
ಇವರು ಜಮೀನಿನ ದನದ ಕೊಟ್ಟಿಗೆಯಲ್ಲಿ ಆಕಳುಗಳನ್ನು ಕಟ್ಟಿದ್ದರು. ಯಾರೋ ಕಳ್ಳರು ರಾತ್ರಿ ಸಮಯದಲ್ಲಿ 80 ಸಾವಿರ ರೂ. ಮೌಲ್ಯದ ಎರಡು ಆಕಳುಗಳನ್ನು ಕಳ್ಳತನ ಮಾಡಿದ್ದಾರೆ. ಈ ಕುರಿತು ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.