ಕೆರೆಯಲ್ಲಿ ಮುಖ ತೊಳೆಯಲು ಹೋದ ಯುವಕ ಸಾವು

Crime
Crime
Published on

ಶಿಗ್ಗಾಂವ: ಮುಖ ತೊಳೆಯುವ ಸಲುವಾಗಿ ಕೆರೆಗೆ ಇಳಿದಾಗ ಕಾಲು ಜಾರಿ ಕೆರೆಯ ಪಿಚ್ಚಿಂಗ್ ಮೇಲೆ ಬಿದ್ದು ಯುವಕನೊಬ್ಬ ಘಟನೆ ತಾಲೂಕಿನ ನಾಗನೂರ ಕೆರೆಯಲ್ಲಿ ನಡೆದಿದೆ.

ಪವನ ಚಂದ್ರಶೇಖರ ಹಡಪದ (18) ಮೃತ ಯುವಕ.

ಈತ ಕೆರೆಯಲ್ಲಿ ಮುಖ ತೊಳೆಯುವ ಸಲುವಾಗಿ ಹೋದಾಗ ಕಾಲು ಜಾರಿ ಕೆರೆಯ ಪಿಚ್ಚಿಂಗ್ನಲ್ಲಿ ಬಿದ್ದಿದ್ದಾನೆ. ಇದರಿಂದ ತಲೆಗೆ ಬಲವಾದ ಪೆಟ್ಟು ಬಿದ್ದು ಮೃತಪಟ್ಟಿದ್ದಾನೆ. ಈ ಕುರಿತು ಶಿಗ್ಗಾಂವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net