ಕುರಿಗೆ ನೀರು ಕುಡಿಸಲು ಹೋಗಿ ಕೆರೆಗೆ ಬಿದ್ದು ಸಾವು

Crime
Crime
Published on

ಹಾನಗಲ್ಲ: ಕುರಿಗಳಿಗೆ ನೀರು ಕುಡಿಸಲು ಹೋದ ವ್ಯಕ್ತಿಯೊಬ್ಬ ಕೆರೆಯಲ್ಲಿ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಗಿರಿಶಿನಕೊಪ್ಪ ಗ್ರಾಮದಲ್ಲಿ ನಡೆದಿದೆ.

ನಾಗರಾಜ ಕರಬಸಪ್ಪ ಸಿರಿಗೇರಿ (44) ಮೃತ ವ್ಯಕ್ತಿ.

ಈತ ಕುರಿಗಳಿಗೆ ನೀರು ಕುಡಿಸುವ ಸಲುವಾಗಿ ಕೆರೆಗೆ ಹೋಗಿದ್ದ. ಈ ಸಮಯದಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ. ಈ ಕುರಿತು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net