ಹಾನಗಲ್ಲ: ಕೆರೆಯಲ್ಲಿ ಮುಖ ತೊಳೆಯಲು ಹೋದ ವ್ಯಕ್ತಿಯೊಬ್ಬ ನೀರಿನಲ್ಲಿ ಮುಳಗಿ ಮೃತಪಟ್ಟ ಘಟನೆ ತಾಲೂಕಿನ ಹುಲಗಡ್ಡಿ ಗ್ರಾಮದಲ್ಲಿ ನಡೆದಿದೆ..ವೀರೇಶ ಮಲ್ಲೇಶಪ್ಪ ತಂಬೂರಿ (32) ಮೃತ ವ್ಯಕ್ತಿ..ಈತ ಕೆರೆಯಲ್ಲಿ ಮುಖ ತೊಳೆಯಲು ಹೋದಾಗ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾನೆ. ಈ ಕುರಿತು ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.