

ಬಂಕಾಪುರ: ಕಸದ ಜಾಗದಲ್ಲಿ ಪ್ಲಾಸ್ಟಿಕ್ ಆರಿಸುವಾಗ ಮುಖ ನೆಲಕ್ಕೆ ಹಚ್ಚಿ ಬಿದ್ದ ಪುರಸಭೆ ಕಾರ್ಮಿಕ ಅಲ್ಲಿಯೆ ಮೃತಪಟ್ಟ ಘಟನೆ ಪಟ್ಟಣದ ಹಳೇ ಬಂಕಾಪುರ ಪುರಸಭೆ ಕಸ ಚೆಲ್ಲುವ ಜಾಗದಲ್ಲಿ ನಡೆದಿದೆ.
ನಿಂಗಪ್ಪ ಮೈಲಪ್ಪ ಮಾದರ (34) ಮೃತ ಕಾಮಿರ್ಕ.
ಈತ ಕಸ ಚೆಲ್ಲುವ ಜಾಗದಲ್ಲಿ ಪ್ಲಾಸ್ಟಿಕ್ ಆರಿಸುತ್ತಿದ್ದಾಗ ಆಕಸ್ಮಿಕವಾಗಿ ಮುಖ ಹೆಚ್ಚಿ ನೆಲಕ್ಕೆ ಬಿದ್ದಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ. ಈ ಕುರಿತು ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.