ಹಾವೇರಿ ನಗರದ ಕರವೇ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಅರಗೋಳ ಅವರಿಗೆ ಆಯ್ಕೆ ಪ್ರಮಾಣ ಪತ್ರ ವಿತರಿಸಿ, ಸನ್ಮಾನಿಸಿ ಗಿರೀಶ ಮಾತನಾಡಿದರು. ‘ರಮೇಶ ಅರಗೋಳ ಅವರು ಗ್ರಾಪಂ ಸದಸ್ಯ, ಅಧ್ಯಕ್ಷ, ತಾಪಂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಪ್ರಸ್ತುತ ಪಟ್ಟಣದ ಪಿಎಲ್ಡಿ ಬ್ಯಾಂಕ್ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೂಲತಃ ಕೃಷಿಕರಾಗಿದ್ದು, ಭೂಮಿಯೊಂದಿಗೆ ಬೆರೆತು ಬದುಕಿದ ಅನುಭವ ಹೊಂದಿರುವವರು. ಮುಂದಿನ ದಿನಗಳಲ್ಲಿ ರೈತರ ಹಕ್ಕುಗಳ ರಕ್ಷಣೆಗೆ ಹಾಗೂ ಕನ್ನಡ ನಾಡು-ನುಡಿಯ ಅಭಿಮಾನ ಬಲಪಡಿಸಲು ದೃಢ ಹೆಜ್ಜೆ ಇಡಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.