kanak ಜಯಂತಿಗಳು ಸಮಾಜಗಳಿಗೆ ಸೀಮಿತವಾಗದಿರಲಿ

ಬ್ಯಾಡಗಿ ತಾಲೂಕಿನ ಕಾಗಿನೆಲೆ ಕನಕಗುರುಪೀಠದಲ್ಲಿ ಆಯೋಜಿಸಿದ್ದ ಭಕ್ತಶ್ರೇಷ್ಠ ಕನಕದಾಸರ (kanak)ಜಯಂತ್ಯುತ್ಸವ ಕಾರ್ಯಕ್ರಮವನ್ನು ಕನಕ ಗುರುಪೀಠದ ನಿರಂಜನಾನಂದ ಶ್ರೀಗಳು ಉದ್ಘಾಟಿಸಿದರು. ಶಾಸಕ ಬಸವರಾಜ ಶಿವಣ್ಣನವರ, ಎಸ್.ಎಫ್.ಎನ್. ಗಾಜಿಗೌಡರ, ಎಸ್.ಆರ್. ಪಾಟೀಲ, ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮವರ, ಯಶೋಧಾ ವಂಟಗೋಡಿ, ಡಾ. ನಾಗರಾಜ, ಇತರರಿದ್ದರು.
ಬ್ಯಾಡಗಿ ತಾಲೂಕಿನ ಕಾಗಿನೆಲೆ ಕನಕಗುರುಪೀಠದಲ್ಲಿ ಆಯೋಜಿಸಿದ್ದ ಭಕ್ತಶ್ರೇಷ್ಠ ಕನಕದಾಸರ (kanak)ಜಯಂತ್ಯುತ್ಸವ ಕಾರ್ಯಕ್ರಮವನ್ನು ಕನಕ ಗುರುಪೀಠದ ನಿರಂಜನಾನಂದ ಶ್ರೀಗಳು ಉದ್ಘಾಟಿಸಿದರು. ಶಾಸಕ ಬಸವರಾಜ ಶಿವಣ್ಣನವರ, ಎಸ್.ಎಫ್.ಎನ್. ಗಾಜಿಗೌಡರ, ಎಸ್.ಆರ್. ಪಾಟೀಲ, ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮವರ, ಯಶೋಧಾ ವಂಟಗೋಡಿ, ಡಾ. ನಾಗರಾಜ, ಇತರರಿದ್ದರು.
Published on
ಬ್ಯಾಡಗಿ: ದಾರ್ಶನಿಕರು ಜಯಂತಿಗಳನ್ನು ಆಯಾ ಸಮಾಜಗಳಿಗೆ ಸೀಮಿತಗೊಳಿಸದೆ ಅವರ ಆದರ್ಶ ಹಾಗೂ ಸಾಮಾಜಿಕ ಹೋರಾಟಗಳ ಉದ್ದೇಶ ಅರ್ಥಮಾಡಿಕೊಂಡು ಕಾರ್ಯಕ್ರಮಗಳಲ್ಲಿ ಎಲ್ಲರೂ ಪಾಲ್ಗೊಂಡರೆ ಉತ್ಸವ ಸಾರ್ಥಕವಾಗಲಿದೆ ಎಂದು ಕಾಗಿನೆಲೆ ಕನಕ (kanak) ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಹೇಳಿದರು.
ತಾಲೂಕಿನ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಕನಕದಾಸರ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಮಹಾತ್ಮರ ಜಯಂತಿಗಳಲ್ಲಿ ಎಲ್ಲ ಸಮಾಜಗಳು ಪಾಲ್ಗೊಳ್ಳದಿರುವುದು ದುರಂತ. ಕನಕದಾಸ ಕುರುಬರಿಗೆ, ಬಸವಣ್ಣ ಲಿಂಗಾಯತರಿಗೆ, ಡಾ.ಬಿ.ಆರ್. ಅಂಬೇಡ್ಕರ್ ದಲಿತರಿಗೆ ಸೀಮಿತವಾಗಬಾರದು. ಮಹಾತ್ಮರು ಸರ್ವ ಸಮಾಜಗಳ ಹಿತ ಹಾಗೂ ಒಳಿತಿಗಾಗಿ ಶ್ರಮಿಸಿದ್ದು, ಎಲ್ಲ ಸಮಾಜದವರು ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತಾಗಬೇಕು. ಸಭೆ, ಸಮಾರಂಭ ಮಾಡುವಾಗ ಸರ್ಕಾರ ಎಲ್ಲರನ್ನು ಆಹ್ವಾನಿಸಬೇಕು ಎಂದರು.
12ನೇ ಶತಮಾನಕ್ಕಿಂತಲೂ ಹಿಂದೆ ಶರಣರು, ಸಾಧು ಸಜ್ಜನರು, ಸಮಾಜ ಚಿಂತಕರು, ಮಹಾತ್ಮರು, ದಾರ್ಶನಿಕರು ಸಮಾಜ ಸುಧಾರಣೆಗೆ ಹೋರಾಟ ನಡೆಸಿದ್ದರು. ದಾಸಶ್ರೇಷ್ಠ ಕನಕದಾಸರು ಸಮಾಜದಲ್ಲಿ ಬೇರೂರಿದ್ದ ಜಾತೀಯತೆ ತೊಲಗಿಸಬೇಕು. ಜಾತಿ ರಹಿತ ಸಮಾಜ ನಿರ್ಮಿಸಲು ತಮ್ಮ ಸಾಹಿತ್ಯ ಮೂಲಕ ಯತ್ನಿಸಿದ್ದರು. ಸಮಾಜದಲ್ಲಿ ಸಮಾನತೆ ಹರಿಕಾರರಾಗಿ ವ್ಯವಸ್ಥೆ ವಿರುದ್ಧ ಹೋರಾಡಿದರು. ನಾವೆಲ್ಲ ಒಂದೇ ಎನ್ನುವ ಭಾವನೆ ಬೆಳೆಸಿಕೊಂಡು ಒಂದಾಗಿ ಜೀವಿಸಬೇಕಿದೆ. ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲ ಯಾವುದೆಂದು ಬಲ್ಲಿರಾ ಎನ್ನುವ ಒಂದೆ ಸಾಲಿನಲ್ಲಿ ಸಾಕಷ್ಟು ಅರ್ಥಗರ್ಭಿತವಾಗಿದೆ. ಸರ್ವಧರ್ಮಗಳ ಗ್ರಂಥಗಳಲ್ಲಿಯೂ ಭಾವೈಕ್ಯ ಎತ್ತಿ ಹೇಳಿದ್ದು, ಸರ್ವರನ್ನು ಗೌರವಿಸುವ ಮೂಲಕ ಸಮಸಮಾಜ ನಿರ್ಮಿಸಬೇಕು ಎಂದರು.
ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಕನಕದಾಸರು ಅಸಮಾನತೆ ವಿರುದ್ಧ ಹೋರಾಟ ನಡೆಸುವ ಮೂಲಕ ಸರ್ವರಿಗೂ ಅರ್ಥವಾಗುವ ಶೈಲಿಯಲ್ಲಿ ತಮ್ಮ ಸಾಹಿತ್ಯ ರಚಿಸಿದ್ದಾರೆ. ಕಾಗಿನೆಲೆ ಕನಕಗುರುಪೀಠ ಹಾಗೂ ಅಭಿವೃದ್ಧಿ ಪ್ರಾಧಿಕಾರದಿಂದ ಕನಕದಾಸರ ಸಾಹಿತ್ಯ ಹಾಗೂ ಜೀವನ ಚರಿತ್ರೆಗಳು ಪ್ರಕಟವಾಗಿವೆ. ಸಾಹಿತ್ಯವನ್ನು ಎಲ್ಲರೂ ಅಧ್ಯಯನ ಮಾಡಿದಾಗ ದಾಸರ ನೈಜ ಹೋರಾಟ ಅರಿವಿಗೆ ಬರಲಿದೆ ಎಂದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾಗಿನೆಲೆ ಗುರುಪೀಠದ ಆಡಳಿತಾಧಿಕಾರಿ ಎಸ್.ಎಫ್.ಎನ್. ಗಾಜಿಗೌಡರ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ಕಾಗಿನೆಲೆ ಪ್ರಾಧಿಕಾರದ ಆಯುಕ್ತ ಡಾ. ನಾಗರಾಜ, ಜಿಪಂ ಉಪಕಾರ್ಯದರ್ಶಿ ಪುನೀತ್, ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಲೆ, ತಹಸೀಲ್ದಾರ್ ಶರಣಮ್ಮ ಕಾರಿ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ, ಮಾಜಿ ಸಚಿವ ಆರ್. ಶಂಕರ, ಕುರುಬ ಸಮಾಜದ ಜಿಲ್ಲಾಧ್ಯಕ್ಷ ನಾಗರಾಜ ಆನ್ವೇರಿ, ಬೀರಪ್ಪ ಬಣಕಾರ, ನಿಂಗಪ್ಪ ಆಡಿನವರ, ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net