ಚಿನ್ನಾಭರಣ ದೋಚುತ್ತಿದ್ದ ಕತರ್ನಾಕ್ ಮಹಿಳೆ ಕಂಬಿ ಹಿಂದೆ

ಪೊಲೀಸರ ವಶ ಪಡಿಸಿಕೊಂಡ ಚಿನ್ನಾಭರಣ
ಪೊಲೀಸರ ವಶ ಪಡಿಸಿಕೊಂಡ ಚಿನ್ನಾಭರಣ
Published on

ರಾಣೆಬೆನ್ನೂರ: ಗಮನ ಬೇರಡೆ ಸೆಳೆದು ಬಟ್ಟೆ ಅಂಗಡಿ- ಸೇರಿ ಇತರ ಮಳಿಗೆಗಳಲ್ಲಿ ಮಹಿಳೆಯರ ವೇನಿಟಿ ಬ್ಯಾಗ್ನಿಂದ ಚಿನ್ನಾಭರಣ ದೋಚುತ್ತಿದ್ದ ಚಾಲಾಕಿ ಆರೋಪಿತಳನ್ನು ಬಂಧಿಸುವಲ್ಲಿ ಇಲ್ಲಿಯ ಶಹರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಭೀಮಾ ನಗರದ ನಿವಾಸಿ ಸಿರಿನಾಬಾನು ಮಹಮ್ಮದ್ ಜಾಫರ್ ಹೆಡಿಯಾಲ (35) ಬಂಧಿತ ಮಹಿಳೆ. ಈಕೆಯಿಂದ 4.76 ಲಕ್ಷ ರೂ. ಮೌಲ್ಯದ 59 ಗ್ರಾಂ ಚಿನ್ನಾಭರಣ, 70 ಗ್ರಾಂ ಬೆಳ್ಳಿಯ ಆಭರಣ ವಶಪಡಿಸಿಕೊಳ್ಳಲಾಗಿದೆ.

ಆರೋಪಿತಳು ನಗರದ ಬಟ್ಟೆ ಅಂಗಡಿಗಳಲ್ಲಿ ವ್ಯಾಪಾರಕ್ಕೆ ಬರುವ ಮಹಿಳೆಯರನ್ನು ಟಾರ್ಗೇಟ್ ಮಾಡಿ ಅವರ ಬ್ಯಾಗ್ನಿಂದ ಚಿನ್ನಾಭರಣ ದೋಚುತ್ತಿದ್ದಳು. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಶಬೀನಾ ಮುಲ್ಲಾ ಎಂಬುವರು ಜ. 26ರಂದು ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ಕೈಗೊಂಡ ಶಹರ ಠಾಣೆ ಪೊಲೀಸರು ನಗರದ ದುರ್ಗಾ ವೃತ್ತದ ಬಳಿ ಆರೋಪಿತಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.

ಎಸ್ಪಿ ಹಾಗೂ ಡಿವೈಎಸ್ಪಿ ಲೋಕೇಶ ಜೆ. ಮಾರ್ಗದರ್ಶನದಲ್ಲಿ ಸಿಪಿಐ ವೆಂಕಟೇಶ ಎನ್., ಪಿಎಸ್ಐಗಳಾದ ಪರಮೇಶ ಡಿ.ಜಿ. ಎಚ್.ಎನ್. ದೊಡ್ಡಮನಿ, ಎಎಸ್ಐ ಬಿ.ಎಸ್. ವಡ್ಡರ, ಡಿ.ಜಿ. ಇಂಗಳಗುಂದಿ ಹಾಗೂ ಸಿಬ್ಬಂದಿಯಾದ ಪಿ.ಕೆ. ಸನದಿ, ಪಿ.ಕೆ. ಲಮಾಣಿ, ಮಂಜುನಾಥ ರೊಟ್ಟಿಯವರ, ಎಚ್.ಎಲ್. ದನವಿನಮನಿ, ಎಚ್.ಟಿ. ನಾಗಾವತ್, ಎಲ್.ಬಿ. ಕರಿಗಾರ, ಶಿವಲೀಲಾ ಡೊಂಬರ, ಶ್ರೀಕಾಂತ ಕೊರವರ ಕಾರ್ಯಾಚರಣೆ ನಡೆಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net