ಕಡಿಮೆ ಬೆಲೆಗೆ ಚಿನ್ನ ಮಾರಾಟ ಮಾಡುವ ನೆಪದಲ್ಲಿ ಹಣ ಲೂಟಿ

Crime
Crime
Published on

ರಾಣೆಬೆನ್ನೂರು: ಕಡಿಮೆ ಬೆಲೆಗೆ ಚಿನ್ನ ಮಾರಾಟ ಮಾಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬನಿಂದ 5 ಲಕ್ಷ ರೂ. ಹಾಗೂ ಬೆಳ್ಳಿನ ಬ್ರಾಸ್ಲೈಟ್ ಕಿತ್ತುಕೊಂಡು ಓಡಿಹೋದ ಘಟನೆ ತಾಲೂಕಿನ ಹಲಗೇರಿ ಗ್ರಾಮದ ಬಳಿ ನಡೆದಿದೆ.

ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಜಿಗಜೆವಣಿ ಗ್ರಾಮದ ಶಶಿಕುಮಾರ ಶ್ರೀಮಂತ ಹೊನಮೋರೆ (28) ಎಂಬುವರಿಗೆ ವಂಚಿಸಿರುವುದು.

ಇವರು ಹುಬ್ಬಳ್ಳಿಯಲ್ಲಿ ಎಐಬಿಇ ಪರೀಕ್ಷೆ ಬರೆಯಲು ಹೋದಾಗ ಮಂಜಣ್ಣ ಎಂಬ ವ್ಯಕ್ತಿ ಪರಿಚಯ ಮಾಡಿಕೊಂಡಿದ್ದಾನೆ. ನಂತರ ನಮ್ಮ ಮನೆಯಲ್ಲಿ ಚಿನ್ನದ ನಿಧಿ ಸಿಕ್ಕಿದೆ. ಅದರಲ್ಲಿ 2 ಕೆ.ಜಿ.ಯಷ್ಟು ಚಿನ್ನ ದೊರೆತಿದೆ. ಅದನ್ನು 5 ಲಕ್ಷ ರೂ.ಗೆ ಮಾರಾಟ ಮಾಡುತ್ತೇನೆ. ಬೇಕಾದರೆ ನೀವು ತೆಗೆದುಕೊಳ್ಳಿ ಎಂದು ಹೇಳಿದ್ದಾನೆ. ಇದನ್ನ ನಂಬಿದ ಶಶಿಕುಮಾರ 5 ಲಕ್ಷ ರೂ. ತೆಗೆದುಕೊಂಡು ಬಂದಾಗ ಆರೋಪಿತರು ತಾಲೂಕಿನ ಹಲಗೇರಿ ಗ್ರಾಮದ ಬಳಿ ಬರಲು ಹೇಳಿದ್ದಾರೆ. ಶಶಿಕುಮಾರ ಹಣ ತೆಗೆದುಕೊಂಡು ಬಂದಾಗ ಹಣ ಮತ್ತು ಆತನ ಕೈಯಲ್ಲಿದ್ದ 5 ಗ್ರಾಂ ತೂಕದ ಬೆಳ್ಳಿಯ ಬ್ರಾಸ್ಲೈಟ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net