ರಾಣೆಬೆನ್ನೂರು: ಅಪ್ರಾಪ್ತನಿಗೆ ಕಾರು ಚಾಲನೆ ಮಾಡಲು ನೀಡಿದ ವಾಹನ ಮಾಲೀಕನಿಗೆ ಒಂದು ದಿನ ಜೈಲು ಶಿೆ ಹಾಗೂ 30 ಸಾವಿರ ರೂ. ದಂಡ ವಿಧಿಸಿ ಇಲ್ಲಿಯ ಪ್ರಧಾನ ಸಿಜೆ ಹಾಗೂ ಜೆಎಂಎ್ಸಿ ನ್ಯಾಯಾಧೀಶ ಆದಿತ್ಯಕುಮಾರ ಎಚ್.ಆರ್. ಬುಧವಾರ ಆದೇಶ ಹೊರಡಿಸಿದ್ದಾರೆ.
ಇಲ್ಲಿಯ ಉಮಾಶಂಕರ ನಗರದ ನಿವಾಸಿ ಜಬೀವುಲ್ಲಾ ಸೈಯ್ಯದ ಹುಸೇನಸಾಬ ಹಳ್ಳಳ್ಳಿ ಎಂಬುವನಿಗೆ ಶಿೆ ವಿಧಿಸಿರುವುದು.
ಈತ ನಗರದಲ್ಲಿ ಅಪ್ರಾಪ್ತನಿಗೆ ಕಾರು ಚಾಲನೆ ನೀಡಿದ್ದನು. ಇದರಿಂದ ಅಪ್ರಾಪ್ತ ಕಾರನ್ನು ಅಪಘಾತಪಡಿಸಿದ್ದ. ಈ ಕುರಿತು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಾಾಧಾರಗಳ ಸಮೇತ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾದೀಶರು ಅಪರಾಧಿಗೆ ಶಿೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಪ್ರಶಾಂತ ಯಲಿಗಾರ ವಾದ ಮಂಡಿಸಿದ್ದರು.