Disrespect ಬೀದಿಯಲ್ಲಿ ವಿಗ್ರಹವಿಟ್ಟು ಅಗೌರವ ತೋರುವುದು ಸಲ್ಲ

ಹಾನಗಲ್ಲಿನಲ್ಲಿ ಕನಕದಾಸರ 12 ಅಡಿ ಕಂಚಿನ ಪುತ್ಥಳಿಯನ್ನು ಶಾಸಕ ಶ್ರೀನಿವಾಸ ಮಾನೆ ಅನಾವರಣಗೊಳಿಸಿದರು. ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಮಹೇಶ ಪವಾಡಿ, ಶಿವರಾಜ ಸಜ್ಜನರ ಇತರರಿದ್ದರು.
ಹಾನಗಲ್ಲಿನಲ್ಲಿ ಕನಕದಾಸರ 12 ಅಡಿ ಕಂಚಿನ ಪುತ್ಥಳಿಯನ್ನು ಶಾಸಕ ಶ್ರೀನಿವಾಸ ಮಾನೆ ಅನಾವರಣಗೊಳಿಸಿದರು. ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಮಹೇಶ ಪವಾಡಿ, ಶಿವರಾಜ ಸಜ್ಜನರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಾಗಿನೆಲೆ ಕನಕ ಗುರುಪೀಠದ ಜ. ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹೇಳಿಕೆ
ಹಾನಗಲ್ಲ:
ಪಟ್ಟಣದ ಬಸ್ ನಿಲ್ದಾಣದ ಬಳಿಯ ಕನಕ ಉದ್ಯಾನದಲ್ಲಿ ಸೋಮವಾರ ದಾಸಶ್ರೇಷ್ಠ ಭಕ್ತ ಕನಕದಾಸರ 12 ಅಡಿ ಕಂಚಿನ ಪುತ್ಥಳಿ ಅನಾವರಣಗೊಳಿಸಿದ ಬಳಿಕ ಡಾ.ಬಾಬು ಜಗಜೀವರಾಂ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.
2003ರಲ್ಲಿ ಪಟ್ಟಣದ ಕನಕದಾಸ ಉದ್ಯಾನದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ವಿರೋಧಿಸಿ ಹೋರಾಟ ಕೈಗೊಂಡಿದ್ದೆ. ಹಾಗಾಗಿ ಇದು ತಮ್ಮ ಜೀವನದ ಮೊದಲ ಹೋರಾಟವಾಗಿದ್ದರಿಂದ ಇಂದು ಮೂರ್ತಿ ಅನಾವರಣ ಸಮಾರಂಭದಲ್ಲಿ ಭಾಗವಹಿಸಬೇಕಾಯಿತು. ಹಾದಿ-ಬೀದಿಗಳಲ್ಲಿ ಮೂರ್ತಿಗಳು ಇರಬಾರದು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ದೇವರ ಮನೆಯಲ್ಲಿಟ್ಟು ಪೂಜಿಸಬೇಕಾದ ವಿಗ್ರಹಗಳನ್ನು ಹಾದಿ-ಬೀದಿಗಳಲ್ಲಿಟ್ಟು ಅವುಗಳ ನಿರ್ವಹಣೆ ಮಾಡದೇ ಅವುಗಳಿಗೆ ಅಗೌರವ ತೋರುವುದು ಎಷ್ಟು ಸರಿ?. ಈ ವಿಗ್ರಹಗಳಿಗೆ ತಗುಲುವ ವೆಚ್ಚವನ್ನು ಸಮಾಜದ ಬಡ ಮಕ್ಕಳ ಶಿಕ್ಷಣಕ್ಕಾಗಿ ವೆಚ್ಚ ಮಾಡಿದರೆ ಮುಂದಿನ ಪೀಳಿಗೆ ಬದುಕು ಕಟ್ಟಿಕೊಳ್ಳಲು ಸಹಕಾರವಾಗುತ್ತದೆ. ಕನಕದಾಸರ, ರಾಯಣ್ಣನ ಮೂರ್ತಿಗಳ ಪ್ರತಿಷ್ಠಾಪನೆಯಿಂದ ಅವರ ಸಂದೇಶಗಳು ಸಾಕಾರಗೊಳ್ಳುವುದಿಲ್ಲ. ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಜೀವನ ಸಾರ್ಥಕವಾಗುತ್ತದೆ ಎಂದರು.
ಶಾಸಕ ಶ್ರೀನಿವಾಸ ಮಾನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬೇಡವಾದುದನ್ನೇ ಹುಡುಕಲು ಹೋಗುತ್ತೇವೆ ವಿನಃ ನಮ್ಮೊಳಗಿನ ಶಕ್ತಿ, ಸಾಮರ್ಥ್ಯ ಅರಿಯದಾಗಿದ್ದೇವೆ. ಒತ್ತಡದ ಬದುಕಿಗೆ ಸಿಲುಕಿ ನಮ್ಮನ್ನು ನಾವೇ ಮರೆಯುತ್ತಿದ್ದೇವೆ, ಸಂಸ್ಕೃತಿ ಹಾಳು ಮಾಡುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಯಳವಟ್ಟಿ ಗ್ರಾಮದಲ್ಲಿರುವ ಕಾಗಿನೆಲೆ ಗುರುಪೀಠದ ನಿವೇಶನದಲ್ಲಿ ಸಮುದಾಯ ಭವನ ನಿರ್ವಣಕ್ಕೆ ಮುಂದಿನ 2 ವರ್ಷಗಳಲ್ಲಿ ಹಂತ, ಹಂತವಾಗಿ ಅನುದಾನ ದೊರಕಿಸಲಾಗುವುದು ಎಂದು ಭರವಸೆ ನೀಡಿದರು.
ಹೋತನಹಳ್ಳಿಯ ಸಿದ್ಧಾರೂಢ ಮಠದ ಸದ್ಗುರು ಶಂಕರಾನಂದ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಸಂಘದ ತಾಲೂಕಾಧ್ಯಕ್ಷ ಮಹೇಶ ಪವಾಡಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಶಿವರಾಜ ಸಜ್ಜನರ, ಪ್ರಮುಖರಾದ ಯಲ್ಲಪ್ಪ ಕಿತ್ತೂರ, ಭೋಜರಾಜ ಕರೂದಿ, ಎಂ.ಬಿ. ಕಲಾಲ, ಎ.ಎಸ್. ಬಳ್ಳಾರಿ, ನಾಗರಾಜ ಅನ್ವೇರಿ, ರಾಜೇಂದ್ರ ಹಾವೇರಣ್ಣನವರ, ರವಿ ವಡೆಯರ, ಮಾಲತೇಶ ಬ್ಯಾಗವಾದಿ, ಸುರೇಶ ದೊಡ್ಡಕುರುಬರ, ಪ್ರಕಾಶಗೌಡ ಪಾಟೀಲ ಇತರರು ಉಪಸ್ಥಿತರಿದ್ದರು. ದಾನಪ್ಪ ಗಂಟೇರ ಸ್ವಾಗತಿಸಿದರು. ವಿನಾಯಕ ಕುರುಬರ ನಿರೂಪಿಸಿದರು.

ಬ್ರಾಹ್ಮಣ ಮತ್ತು ವೈಶ್ಯ ಸಮಾಜದವರು ಎಂದೂ ಪುತ್ಥಳಿ ಸ್ಥಾಪನೆಗೆ ಮುಂದಾಗಿ ಗೊಂದಲ ಸೃಷ್ಟಿಸಿಕೊಂಡ ಉದಾಹರಣೆಗಳಿಲ್ಲ. ಅವರು ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಪ್ರಾಮುಖ್ಯತೆ ನೀಡುತ್ತಾರೆ. ಅದು ಎಲ್ಲ ಸಮುದಾಯಕ್ಕೂ ಅನುಕರಣೀಯ. ಯಳವಟ್ಟಿ ಗ್ರಾಮದಲ್ಲಿ ಒಂದು ಎಕರೆ ಭೂಮಿಯನ್ನು ದಾನವಾಗಿ ನೀಡಲಾಗಿದೆ. ಅಲ್ಲಿ ಸಮುದಾಯ ಭವನ ನಿರ್ವಿುಸಬೇಕಿದೆ. ಶಾಸಕರ ಪ್ರದೇಶಭಿವೃದ್ಧಿ ಅನುದಾನ ನೀಡಿದರೆ ಸಮಾಜದ ಬಡ ಕುಟುಂಬಗಳ ಕಾರ್ಯಕ್ರಮಕ್ಕೆ ಸಹಾಯವಾಗುತ್ತದೆ.

| ನಿರಂಜನಾನಂದಪುರಿ ಶ್ರೀಗಳು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net