ಬಾಲಕಿ ಭೂಮಿಕಾ ಈಟೇರ, ರಾಣೆಬೆನ್ನೂರಿನ ಸೌಮ್ಯ ಕೆಂಪಣ್ಣನವರ ಹಾಡುಗಳ ಮೂಲಕ ಗಮನಸೆಳೆದರು. ತಾಲೂಕಿನ ಮಕರಿ ಗ್ರಾಮದ ಅಂತಾರಾಷ್ಟ್ರೀಯ ಯೋಗಪಟು ಕೋಮಲಾ ಚೆನ್ನಗೌಡ್ರ ಬಸವನಾಳ ಯೋಗಾಸನ ಪ್ರದರ್ಶಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷೆ ವಸಂತ ಅಬಲುರ, ಮಾಜಿ ಶಾಸಕ ಅರುಣಕುಮಾರ ಪೂಜಾರ, ಡಿ.ಎಂ.ಸಾಲಿ ಮಾತನಾಡಿದರು. ಬಿಜೆಪಿ ತಾಲೂಕಾಧ್ಯಕ್ಷ ದೇವರಾಜ ನಾಗಣ್ಣನವರ, ಸಂಜೀವ ಕಬ್ಬಿಣಕಂತಿಮಠ, ಆರ್.ಎನ್. ಗಂಗೋಳ, ಜಿ.ಪಿ. ಪ್ರಕಾಶ, ಲತಾ ಬಣಕಾರ, ರವಿಶಂಕರ ಬಾಳೇಕಾಯಿ, ಶಂಭಣ್ಣ ಗೂಳಪ್ಪನವರ, ಹನುಮಂತಪ್ಪ ಗಾಜೇರ, ಪ.ಪಂ.ಉಪಾಧ್ಯಕ್ಷ ಶಿವಕುಮಾರ ಉಪ್ಪಾರ, ನಾಗರಾಜ ಹಿರೇಮಠ, ಮಾಲತೇಶ ಗಂಗೋಳ, ಮಧು ಪಾಟೀಲ, ಕೋಕಿಲಾ, ಇತರರು ಇದ್ದರು.