ಹೊಸ ಮೆಣಸಿನಕಾಯಿ ಆವಕದಲ್ಲಿ ಏರಿಕೆ

ಸರಾಸರಿ ೫೫ ಸಾವಿರ ರೂ.ನಂತೆ ಕಡ್ಡಿ, ಡಬ್ಬಿ ತಳಿ ಮಾರಾಟ
Bags of chillies placed for tender at the Byadgi market.
ಬ್ಯಾಡಗಿ ಮಾರುಕಟ್ಟೆಯಲ್ಲಿ ಟೆಂಡರ್‌ಗೆ ಇಟ್ಟಿದ್ದ ಮೆಣಸಿನಕಾಯಿ ಚೀಲಗಳು.
Published on: 

ಬ್ಯಾಡಗಿ: ಕಡ್ಡಿ ಹಾಗೂ ಡಬ್ಬಿ ತಳಿಯ ಮೆಣಸಿನಕಾಯಿ ಪ್ರಸಕ್ತ ಸಾಲಿನಲ್ಲಿ ಹೆಚ್ಚಿನ ಬೆಲೆಯಲ್ಲಿ ಮಾರಾಟವಾಗುತ್ತಿದ್ದು, ಈ ವಾರದಿಂದ ಮಾರುಕಟ್ಟೆಗೆ ಹೊಸ ಮೆಣಸಿನಕಾಯಿ ಆವಕ ಏರಿಕೆಯಾಗಿದೆ.

ದಸರಾ, ಶೀಗೆ ಹುಣ್ಣಿಮೆ ಹಬ್ಬಗಳು ಮುಗಿಯುತ್ತಿದ್ದಂತೆ, ಮಂಗಳವಾರ 14,410 ಚೀಲ ಆವಕವಾಗಿ ವಹಿವಾಟು ಏರಿಕೆಯಾಗಿದೆ. ಪರಿಣಾಮ ವರ್ತಕರು, ದಲ್ಲಾಳಿ ಅಂಗಡಿಕಾರರು, ಹಮಾಲರಲ್ಲಿ ಉತ್ಸಾಹ ಇಮ್ಮಡಿಸಿದೆ.

ಎರಡು ವರ್ಷಗಳಿಂದ ಒಣ ಮೆಣಸಿನಕಾಯಿ ಬೆಲೆ ಏರಿಕೆಯಾಗುತ್ತಲಿದೆ. ಕಳೆದ ತಿಂಗಳು ಡಬ್ಬಿ, ಕಡ್ಡಿ ತಳಿ ದರ ಕ್ವಿಂಟಾಲ್​ಗೆ 80 ಸಾವಿರ ರೂ. ತಲುಪಿತ್ತು. ಕ್ವಿಂಟಾಲ್​ಗೆ ಸರಾಸರಿ 55 ಸಾವಿರ ರೂ. ದರ ಸ್ಥಿರತೆ ಕಾಯ್ದುಕೊಂಡಿದೆ.

ಮಂಗಳವಾರ ಟೆಂಡರ್​ನಲ್ಲಿ ಡಬ್ಬಿ ತಳಿ ಕ್ವಿಂಟಾಲ್​ಗೆ 6389ರಿಂದ 76699 ರೂಪಾಯಿವರೆಗೆ ಮಾರಾಟವಾಗಿದೆ. ಸರಾಸರಿ ದರ 63509 ರೂ. ಇತ್ತು. ಕಡ್ಡಿ ತಳಿ ಕ್ವಿಂಟಾಲ್​ಗೆ 5509 ರಿಂದ 70777 ರೂಪಾಯಿವರೆಗೆ ಮಾರಾಟವಾಗಿ, ಸರಾಸರಿ ದರ 56529 ರೂ. ಇತ್ತು. ಗುಂಟೂರು ತಳಿ ಕ್ವಿಂಟಾಲ್​ಗೆ 2509 ರಿಂದ 25869 ರೂ.ವರೆಗೆ ಮಾರಾಟವಾದರೆ, ಸರಾಸರಿ ದರ 15899 ರೂ. ಲಭಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net