ಹಿಂದೂ ಸಂಟನೆಗಳಿಂದ ಬೃಹತ್ ಪ್ರತಿಭಟನೆ

ಪ್ರತಿಭಟನೆ
ಪ್ರತಿಭಟನೆ
Published on

ರಾಣೆಬೆನ್ನೂರು: ನಗರದಲ್ಲಿರುವ ಅಕ್ರಮ ಕಸಾಯಿಖಾನೆಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ಹಾಗೂ ಗೋರಕ್ಷಕರ ಮೇಲೆ ಹಲ್ಲೆ ಮಾಡಿರುವುದನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್, ಭಜರಂಗದಳ ಹಾಗೂ ವಿವಿಧ ಹಿಂದೂಪರ ಸಂಟನೆಗಳ ವತಿಯಿಂದ ಮಂಗಳವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ನಗರದ ಕೆಇಬಿ ಗಣೇಶ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಬಸ್ ನಿಲ್ದಾಣ, ಕೋರ್ಟ್ ವೃತ್ತ, ಹಲಗೇರಿ ವೃತ್ತ, ಕುರುಬಗೇರಿ ಕ್ರಾಸ್, ಹಳೇ ಪಿಬಿ ರಸ್ತೆಯ ಮೂಲಕ ಮಿನಿ ವಿಧಾನಸೌಧ ತಲುಪಿತು. ನಗರದಲ್ಲಿರುವ ಅಕ್ರಮ ಕಸಾಯಿಖಾನೆ ತೆರವುಗೊಳಿಸಬೇಕು. ಗೋರಕ್ಷಕರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಅಕ್ರಮವಾಗಿ ಜಾನುವಾರುಗಳನ್ನು ಕಡಿಯುವುದು ತಪು$್ಪ. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಈ ಕುರಿತು ಕಾಯ್ದೆ ಜಾರಿಗೊಳಿಸಿದೆ. ಆದರೂ ನಗರದಲ್ಲಿ ಕೆಲವರು ಅಕ್ರಮವಾಗಿ ಕಸಾಯಿಖಾನೆಗಳನ್ನು ಮಾಡಿಕೊಂಡು ಗೋಹತ್ಯೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ಕುರಿತು ಪೊಲೀಸರಿಗೆ ಮಾಹಿತಿ ನೀಡುವ ಗೋರಕ್ಷಕರ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಹಲ್ಲೆ ಮಾಡಿರುವ ಟನೆ ಕೂಡ ನಗರದಲ್ಲಿ ನಡೆದಿದೆ. ರಾಣೆಬೆನ್ನೂರು ಶಾಂತವಾಗಿರುವ ಪ್ರದೇಶವಾಗಿದೆ. ಆದರೆ, ಅಕ್ರಮದ ಹೆಸರಿನಲ್ಲಿ ನಡೆಯುತ್ತಿರುವ ಇಂಥ ಕೃತ್ಯಗಳಿಂದ ಕೋಮು ಕೋಮುಗಳ ನಡುವೆ ಜಗಳ ನಡೆಯುವ ಹಂತಕ್ಕೆ ತಲುಪುತ್ತಿದೆ.

ಆದ್ದರಿಂದ ನಗರಸಭೆ, ಸ್ಥಳಿಯ ಆಡಳಿತ, ಜನಪ್ರತಿನಿಧಿಗಳು ಕೂಡಲೇ ಸೂಕ್ತ ಕ್ರಮ ಕೈಗೊಂಡು ಅಕ್ರಮವಾಗಿ ತಲೆಎತ್ತಿರುವ ಕಸಾಯಿಖಾನೆಗಳನ್ನು ಬಂದ್ ಮಾಡಿಸಬೇಕು. ಗೋರಕ್ಷಕರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ವಿನಯ ಬಾಳನಗೌಡ್ರ ಮಾತನಾಡಿ, ಕಳೆದ ಮೇ 24ರಂದು ಅಕ್ರಮ ಕಸಾಯಿಖಾನೆಗಳ ಕುರಿತು ಮಾಹಿತಿ ನೀಡಿದ ಭಜರಂಗದಳದ ಕಾರ್ಯಕರ್ತನ ಮೇಲೆ ನಡೆದ ಹಲ್ಲೆ ಖಂಡನೀಯ. ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿ ಕೇವಲ ಮೂವರು ಯುವಕರ ಬಂಧಿಸಿ ಮುಗಿಸಿದರೆ ಮುಗಿದಂತಾಗುವುದಿಲ್ಲ. ಈ ಹಲ್ಲೆಗೆ ಕುಮ್ಮಕ್ಕು ನೀಡಿದ ಖಸಾಯಿಖಾನೆ ಮಾಲೀಕರು ಸೇರಿ ಎಲ್ಲ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಬಂಜಾರ ಗುರು ಬಾಲ ತಪಸ್ವಿ ಮಹಾರಾಜ (ಕೃಷ್ಣಾಪುರ ಮಠ), ವಿಶ್ವ ಹಿಂದೂ ಪರಿಷತ್ನ ಪ್ರಾಂತ ಸಹ ಕಾರ್ಯದಶಿರ್ ಪುಂಡಲೀಕ್ ದಳವಾಯಿ, ಧಾರವಾಡ ವಿಭಾಗದ ಬಜರಂಗದಳದ ಸಂಚಾಲಕ ಅನಿಲ ಹಲವಾಗಿಲ, ವಿಶ್ವ ಹಿಂದೂ ಪರಿಷನ್ನ ಜಿಲ್ಲಾ ಕಾರ್ಯದಶಿರ್ ಮೃತ್ಯುಂಜಯ ಬೆಣ್ಣಿ ಮತ್ತಿತರರು ಮಾತನಾಡಿದರು.

ತಹಸೀಲ್ದಾರ್ ಆರ್.ಎಚ್. ಭಾಗವಾನ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಹಿರಿಯ ವಕೀಲ ಕೆ. ಶಿವಲಿಂಗಪ್ಪ, ಜಿಪಂ ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ, ನಗರಸಭೆ ಮಾಜಿ ಸದಸ್ಯರಾದ ಮಂಜುನಾಥ ಗೌಡಶಿವಣ್ಣನವರ, ಪ್ರಕಾಶ ಬುರಡಿಕಟ್ಟಿ, ಎಪಿಎಂಸಿ ಮಾಜಿ ಸದಸ್ಯ ಪರಮೇಶಪ್ಪ ಗೂಳಣ್ಣನವರ, ರೈತ ಮುಖಂಡ ಹನುಮಂತಪ್ಪ ಕಬ್ಬಾರ, ಶ್ರೀನಿವಾಸ ಹಳ್ಳಳ್ಳಿ, ನಾರಾಯಣ ಪವಾರ, ಮಂಜುನಾಥ ಕಾಟಿ, ಭಾರತಿ ಜಂಬಗಿ, ರಮೇಶ ಗುತ್ತಲ, ಚೋಳಪ್ಪ ಕಸವಾಳ, ಯುವರಾಜ ಬಾರಟಕ್ಕಿ, ಮೌನೇಶ ತಳವಾರ, ನಾರಾಯಣ ಪವಾರ, ರಾಯಣ್ಣ ಮಾಕನೂರ, ಹನುಮಂತ ಮಿನಿಕಟ್ಟಿ ಸೇರಿ ನೂರಾರು ಜನ ಹಿಂದೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net