

ರಾಣೆಬೆನ್ನೂರು: ತಾಲೂಕಿನ ತುಂಗಭದ್ರಾ ನದಿಪಾತ್ರದಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಅಡ್ಡೆಗಳ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು 17,779 ಮೆಟ್ರಿಕ್ ಟನ್ ಮರಳು, 2 ಜೆಸಿಬಿ, 4 ತೆಪ್ಪಗಳನ್ನು ವಶಪಡಿಸಿಕೊಂಡ ಟನೆ ಶುಕ್ರವಾರ ನಡೆದಿದೆ.
ತಾಲೂಕಿನ ನಿಟಪಳ್ಳಿ, ಚಂದಾಪುರ, ಬೇಲೂರು, ಐರಣಿ, ಹರನಗಿರಿ, ಕೋಟಿಹಾಳ, ಚಿಕ್ಕಕುರುವತ್ತಿ ಸೇರಿ 8 ಗ್ರಾಮಗಳ ಬಳಿ ತುಂಗಭದ್ರಾ ನದಿಪಾತ್ರದಲ್ಲಿ ಅಕ್ರಮವಾಗಿ ಮರಳು ತೆಗೆಯಲಾಗುತ್ತಿತ್ತು. ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಾಪುರೆ ನೇತೃತ್ವದ ತಂಡ ಬರೋಬ್ಬರಿ 17,779 ಮೆಟ್ರಿಕ್ ಟನ್ ಮರಳು ವಶಪಡಿಸಿಕೊಂಡಿದೆ. ಇದರ ಜತೆಗೆ ಮರಳು ತೆಗೆಯಲು ಬಳಸುತ್ತಿದ್ದ 2 ಜೆಸಿಬಿ ಹಾಗೂ ಮರಳು ತೆಗೆಯುತ್ತಿದ್ದ 4 ತೆಪ್ಪಗಳನ್ನು ವಶಪಡಿಸಿಕೊಂಡಿದೆ.
ಲೋಕಾಯುಕ್ತ ಡಿವೈಎಸ್ಪಿ ಮಧುಸೂದನ್ ಸಿ. ಹಾಗೂ ಸಿಬ್ಬಂದಿ ದಾಳಿಯಲ್ಲಿ ಇದ್ದರು.