

ರಾಣೆಬೆನ್ನೂರು: ತಾಲೂಕಿನ ಸೋಮಲಾಪುರ ಹಾಗೂ ಐರಣಿ ಗ್ರಾಮದ ಬಳಿ ತುಂಗಭದ್ರಾ ನದಿಪಾತ್ರದಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಅಡ್ಡೆಗಳ ಗ್ರಾಮೀಣ ಠಾಣೆ ಇನ್ಸಪೆಕ್ಟರ್ ನಾಗಯ್ಯ ಕಾಡದೇವರಮಠ ನೇತೃತ್ವದ ತಂಡ ದಾಳಿ ನಡೆಸಿ 43 ಮೆಟ್ರಿಕ್ ಟನ್ ಮರಳನ್ನು ವಶಪಡಿಸಿಕೊಂಡಿದೆ.
ತಾಲೂಕಿನ ಸೋಮಲಾಪುರ ಗ್ರಾಮದ ಬಳಿ ಆರೋಪಿ ಚೇತನ ಬಸವರಾಜಪ್ಪ ಕಾಯಕದ ಹಾಗೂ ಐರಣಿ ಗ್ರಾಮದ ಬಳಿ ಸುಲ್ತಾನ್ಖಾನ ಅಕ್ಬರಖಾನ್ ಕಂದಾರಿ (28) ಎಂಬುವರು ಅಕ್ರಮವಾಗಿ ಮರಳು ತೆಗೆಯುತ್ತಿದ್ದರು.
ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು 34 ಸಾವಿರ ರೂ. ಮೌಲ್ಯದ ಮರಳನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸರ ದಾಳಿಯಿಂದ ಆರೋಪಿಗಳನ್ನು ಓಡಿ ಹೋಗಿದ್ದು, ಇವರ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.