

ರಟ್ಟಿಹಳ್ಳಿ: ಅಕ್ರಮವಾಗಿ ಗೋ ಮಾಂಸ ಮಾರಾಟ ಮಾಡುತ್ತಿದ್ದ ಆಟೋರಿಕ್ಷಾ ಮೇಲೆ ದಾಳಿ ನಡೆಸಿದ ಪೊಲೀಸರು 56 ಕೆ.ಜಿ. ಗೋಮಾಂಸ ಹಾಗೂ 20 ಕೆ.ಜಿ. ಗೋವಿನ ಗೊಬ್ಬನ್ನು ವಶಪಡಿಸಿಕೊಂಡ ಘಟನೆ ಇಲ್ಲಿಯ ಭಗತ್ಸಿಂಗ್ ವೃತ್ತದಲ್ಲಿ ನಡೆದಿದೆ.
ಹರಿಹರ ತಾಲೂಕಿನ ಭರಮಪುರಿ ಗಾಂಧಿನಗರದ ನಿವಾಸಿ ಎಸ್. ಮಹ್ಮದ್ಖೈಪ್ ಶಬ್ಬೀರ್ (24) ಹಾಗೂ ಮಾಸೂರ ಗ್ರಾಮದ ಇರ್ಫಾನ್ ಬಾಬುಲಾಲ್ಸಾಬ ಮೇಡ್ಲೇರಿ ಎಂಬುವರು ಆಟೋರಿಕ್ಷಾದಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದರು.
ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ 56 ಕೆ.ಜಿ. ಮಾಂಸ, 20 ಕೆ.ಜಿ. ಕೊಬ್ಬು ಹಾಗೂ ಒಂದು ಆಟೋರಿಕ್ಷಾ ವಶಪಡಿಸಿಕೊಂಡಿದ್ದಾರೆ. ಈ ಕುರಿತು ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.