Soil ಮಣ್ಣಿನ ಆರೋಗ್ಯ ಕಾಪಾಡದಿದ್ದರೆ ಇಳುವರಿ ಕುಂಠಿತ

ಬ್ಯಾಡಗಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಕೇಂದ್ರ ಸರ್ಕಾರದ ಖೇತ್ ಬಚಾವೋ ಆಂದೋಲನದ ಅಂಗವಾಗಿ ಆಯೋಜಿಸಿದ್ದ ಸಮತೋಲಿತ ರಸಗೊಬ್ಬರ ಬಳಕೆ ಕುರಿತು ರೈತರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಲಾಯಿತು.  ಮಂಜುನಾಥ ಬೆನಕನಕೊಂಡ, ಗಣೇಶ ಕಮ್ಮಾರ, ಡಾ.ಎ.ಎಚ್. ಬಿರಾದಾರ, ಡಾ.ರಶ್ಮಿ, ಎನ್.ಟಿ. ಪಾಟೀಲ, ಬಸವರಾಜ ಸಂಕಣ್ಣನವರ, ಇತರರಿದ್ದರು.
ಬ್ಯಾಡಗಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಕೇಂದ್ರ ಸರ್ಕಾರದ ಖೇತ್ ಬಚಾವೋ ಆಂದೋಲನದ ಅಂಗವಾಗಿ ಆಯೋಜಿಸಿದ್ದ ಸಮತೋಲಿತ ರಸಗೊಬ್ಬರ ಬಳಕೆ ಕುರಿತು ರೈತರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಲಾಯಿತು. ಮಂಜುನಾಥ ಬೆನಕನಕೊಂಡ, ಗಣೇಶ ಕಮ್ಮಾರ, ಡಾ.ಎ.ಎಚ್. ಬಿರಾದಾರ, ಡಾ.ರಶ್ಮಿ, ಎನ್.ಟಿ. ಪಾಟೀಲ, ಬಸವರಾಜ ಸಂಕಣ್ಣನವರ, ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಂಜುನಾಥ ಬೆನಕನಕೊಂಡ ಹೇಳಿಕೆ
  • ಸಮತೋಲಿತ ರಸಗೊಬ್ಬರ ಬಳಕೆ ಜಾಗೃತಿ ಕಾರ್ಯಕ್ರಮ
ಬ್ಯಾಡಗಿ: ರೈತರು ನೀರು, ಮಣ್ಣು ರಕ್ಷಿಸಿಕೊಂಡಲ್ಲಿ ಕೃಷಿಯಲ್ಲಿ ಯಶಸ್ಸು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ರೈತ ಸಮುದಾಯಕ್ಕೆ ವಿವಿಧ ಕಾರ್ಯಕ್ರಮ ಆಯೋಜಿಸುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಮಂಜುನಾಥ ಬೆನಕನಕೊಂಡ ಹೇಳಿದರು.
ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಕೇಂದ್ರ ಸರ್ಕಾರದ ಖೇತ್ ಬಚಾವೋ ಆಂದೋಲನದ ಅಂಗವಾಗಿ ಆಯೋಜಿಸಿದ್ದ ಸಮತೋಲಿತ ರಸಗೊಬ್ಬರ ಬಳಕೆ ಕುರಿತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ, ಮಣ್ಣಿನ ಫಲವತ್ತತೆ ಕುಸಿತ ಹಾಗೂ ಪರಿಸರದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮ ತಡೆಗಟ್ಟಲು ವೈಜ್ಞಾನಿಕ ಹಾಗೂ ಸುಸ್ಥಿರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಕೃಷಿಯಲ್ಲಿ ಎಷ್ಟೇ ತಾಂತ್ರಿಕತೆ ಅಳವಡಿಸಿಕೊಂಡರೂ, ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳದಿದ್ದಲ್ಲಿ ಎಲ್ಲವೂ ಶೂನ್ಯವಾಗಲಿದೆ ಎಂದರು.
ಸಹಾಯಕ ಕೃಷಿ ನಿರ್ದೇಶಕ ಗಣೇಶ ಕಮ್ಮಾರ ಮಾತನಾಡಿ, ರೈತರು ಸಾವಯವ ಕೃಷಿ, ನೈಸರ್ಗಿಕ ಕೃಷಿ, ಸಮಗ್ರ ಕೃಷಿ ಅನುಸರಿಸಿದಲ್ಲಿ ಯಾವ ಹೊರೆಯೂ ಆಗುವುದಿಲ್ಲ ಎಂದರು.
ಕೃಷಿ ವಿಜ್ಞಾನ ಕೇಂದ್ರ, ಹನುಮನಮಟ್ಟಿ ಮುಖ್ಯಸ್ಥರಾದ ಡಾ.ಎ.ಎಚ್. ಬಿರಾದಾರ, ಡಾ.ರಶ್ಮಿ, ಕೃಷಿಕ ಸಮಾಜದ ಉಪಾಧ್ಯಕ್ಷ ಎನ್.ಟಿ. ಪಾಟೀಲ, ಸದಸ್ಯರಾದ ಬಸವರಾಜ ಸಂಕಣ್ಣನವರ, ಶಂಕರಗೌಡ ಪಾಟೀಲ, ಮಲ್ಲನಗೌಡ ಭದ್ರಗೌಡ್ರ, ಶಿವಪ್ಪ ಪೋಟೇರ, ಎಸ್.ಎನ್. ತೋಟದ, ಕೃಷಿ ಅಧಿಕಾರಿಗಳಾದ ನಾಗರಾಜ ಬನ್ನಿಹಟ್ಟಿ, ನಿಂಗಪ್ಪ ಕಾಕೋಳ, ಆತ್ಮ ಯೋಜನೆ ಸಂಯೋಜಕ ಗುಡ್ಡಪ್ಪ ಅರಳಿಕಟ್ಟಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net