ಕ್ಷೇತ್ರದ ಶಾಸಕರು ಮಂತ್ರಿ ಸ್ಥಾನ ಪಡೆದಲ್ಲಿ ಆಶ್ರಯ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಬೇರೆಯವರನ್ನು ನೇಮಿಸಬಹುದಾಗಿದೆ. ಆದರೆ, ಬ್ಯಾಡಗಿಯಲ್ಲಿ ಕಾಯ್ದೆ ಉಲ್ಲಂಘನೆಯಾಗಿದೆ. ನಿವೇಶನ ಹಂಚಿಕೆ ವಿಷಯದಲ್ಲಿ ಸಾಕಷ್ಟು ಯಡವಟ್ಟಾಗಿದ್ದು, ಅನರ್ಹರಿಗೆ ಅವಕಾಶ ಕಲ್ಪಿಸಲಾಗಿದೆ. ಒಬಿಸಿ ಸಮುದಾಯಕ್ಕೆ ಅವಕಾಶ ಸಿಕ್ಕಿಲ್ಲ. ಆಯ್ಕೆ ವೇಳೆ ಪುರಸಭೆ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಆಸ್ತಿ, ವಾಹನ ಹೊಂದಿದ ಅನರ್ಹರು ಪಟ್ಟಿಯಲ್ಲಿದ್ದು, ಸರಿಯಾಗಿ ಪರಿಶೀಲನೆಯಾಗಬೇಕಿದೆ. ಕೂಡಲೇ ಸರ್ಕಾರ ನಗರ ಆಶ್ರಯ ಸಮಿತಿ ಅಧ್ಯಕ್ಷರು, ಸದಸ್ಯರನ್ನು ವಜಾಗೊಳಿಸಿ ಹೊಸ ಸಮಿತಿ ರಚಿಸಬೇಕು. ಹಳೆಯ ಪಟ್ಟಿ ರದ್ದುಪಡಿಸಿ ಶಾಸಕರ ನೇತೃತ್ವದಲ್ಲಿ ಹೊಸ ಅರ್ಹ ಫಲಾನುಭವಿಗಳ ಆಯ್ಕೆಯಾಗಬೇಕು ಎಂದು ಆಗ್ರಹಿಸಿದರು.