ಅರ್ಜಿ ಕೊಟ್ಟವರಿಗೆ ಮನೆ ಮಂಜೂರು Houses allotted

ಬಂಕಾಪುರ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಶಾಸಕ ಯಾಸೀರಖಾನ್ ಪಠಾಣ ಅವರು Houses allottedಇದ್ದರು.
ಬಂಕಾಪುರ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಶಾಸಕ ಯಾಸೀರಖಾನ್ ಪಠಾಣ ಅವರು Houses allottedಇದ್ದರು.
Published on
ಬಂಕಾಪುರ: ಹಿಂದಿನ ಸರ್ಕಾರದ ಅವಧಿಯಲ್ಲಿ ಹಣ ನೀಡಿದವರಿಗೆ ಆಶ್ರಯ ಮನೆ ನೀಡುತ್ತಿದ್ದರು. ನಮ್ಮ ಸರ್ಕಾರದಲ್ಲಿ ಅದಕ್ಕೆ ಅವಕಾಶವಿಲ್ಲ. ನಾನೇ ಆಶ್ರಯ ಕಮಿಟಿ ಅಧ್ಯಕ್ಷನಿದ್ದು, ಮನೆ ಅವಶ್ಯವಿದ್ದವರು ನನಗೆ ಅರ್ಜಿ ನೀಡಿದರೆ, ಅಂತಹವರಿಗೆ ಮನೆ (Houses allotted) ಹಾಕಿಸುತ್ತೇನೆ ಎಂದು ಶಾಸಕ ಯಾಸೀರ್​ಖಾನ್ ಪಠಾಣ ಹೇಳಿದರು.
ಪಟ್ಟಣದ ಪುರಸಭೆ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಹಿಂದಿನ ಸರ್ಕಾರದ ಅವಧಿಯಲ್ಲಿ ಶಿಗ್ಗಾಂವಿ ಕ್ಷೇತ್ರಕ್ಕೆ ಸ್ಲಂ ಬೋರ್ಡ್​ನಿಂದ ಮಂಜೂರಾದ ಸುಮಾರು 2 ಸಾವಿರ ಮನೆಗಳಿಗೆ ಶೇ. 80ರಷ್ಟು ಬಿಲ್ ಪಾವತಿಸಲಾಗಿದೆ. ಆದರೆ, ಮನೆ ಕಾಮಗಾರಿ ಪೂರ್ಣಗೊಂಡಿಲ್ಲ. ಬಿಲ್ ಪಾವತಿಸಿದ ಸ್ಲಂ ಬೋರ್ಡ್ ಅಧಿಕಾರಿ ನಿವೃತ್ತಿಯಾಗಿದ್ದು, ಅವರ ವಿರುದ್ಧ ಕಾನೂನು ಕ್ರಮಕ್ಕೆ ಸೂಚಿಸಲಾಗಿದೆ. ಈ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ರ್ಚಚಿಸುತ್ತೇನೆ ಎಂದರು.
ಮಾರ್ಚ್ 2025ರಿಂದ ಅಕ್ಟೋಬರ್​ವರೆಗೆ ಈ ಎರಡು ಟ್ರ್ಯಾಕ್ಟರ್​ಗಳ ರಿಪೇರಿಗೆ ಸುಮಾರು 1.73 ಲಕ್ಷ ರೂ. ವ್ಯಯಿಸಲಾಗಿದೆ. ಪ್ರತಿ ತಿಂಗಳು ರಿಪೇರಿ ಹೆಸರಿನಲ್ಲಿ ಹಣ ದುರ್ಬಳಕೆ ಮಾಡಲಾಗಿದೆ. ಜೆರಾಕ್ಸ್, ಸ್ಟೇಷನರಿಗೆ 1.39 ಲಕ್ಷ ರೂ., ನೈರ್ಮಲ್ಯ ವಾಹನಗಳ ಇಂಧನಕ್ಕಾಗಿ 46.26 ಲಕ್ಷ ರೂ., ಕಾರ್ ಬಾಡಿಗೆಗೆ 4 ಲಕ್ಷ ರೂ. ವ್ಯಯಿಸಲಾಗಿದೆ. ವಾರ್ಡ್ ಅಭಿವೃದ್ಧಿಗೆ ಹಣ ಕೇಳಿದರೆ ದುಡ್ಡಿಲ್ಲ ಅಂತಾ ಹೇಳುತ್ತೀರಿ ಎಂದು ಸದಸ್ಯ ರಮೇಶ ಸಿದ್ದುನವರ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಉಳಿದ ಸದಸ್ಯರು ದನಿಗೂಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ, ನಿಮಗೆ ಯಾವ ವಿಷಯದಲ್ಲಿ ಸಂಶಯ ಇದೆಯೋ, ಅದರ ಬಗ್ಗೆ ಅರ್ಜಿ ಸಲ್ಲಿಸಿ ಮಾಹಿತಿ ಪಡೆದುಕೊಳ್ಳುವಂತೆ ತಿಳಿಸಿದರು. ಅಲ್ಲದೆ, ಸಭೆಯಲ್ಲಿ ಮಂಡಿಸುವ ವಿಷಯಗಳು ಪಾರದರ್ಶಕ ಗಿರಬೇಕು. ಸದಸ್ಯರಿಗೆ ಖರ್ಚಿನ ಬಗ್ಗೆ ಸೂಕ್ತ ವಿವರ ಸಲ್ಲಿಸುವಂತೆ, ವಾಣಿಜ್ಯ ಕಟ್ಟಡಗಳ ನಿರ್ವಣ, ಶಾಸಕರ ಅನುದಾನದಲ್ಲಿ ಕೊರೆದಿರುವ 23 ಬೋರವೆಲ್​ಗಳಿಗೆ ಮೋಟರ್ ಅಳವಡಿಸಲು ಮುಖ್ಯಾಧಿಕಾರಿಗೆ ಸೂಚಿಸಿದರು.
ಈಗಾಗಲೇ 94 ಕೋಟಿ ರೂ. ವೆಚ್ಚದ ಕುಡಿಯುವ ನೀರಿನ ಯೋಜನ ಮಂಜೂರಾಗಿದೆ. ಮುಂದಿನ ಬೇಸಿಗೆಯಲ್ಲಿ ಪಟ್ಟಣಕ್ಕೆ ವರದಾ ನದಿ ನೀರು ಪೂರೈಕೆಯಾಗಲಿದೆ ಎಂದು ಶಾಸಕರು ತಿಳಿಸಿದರು.
ಎಸ್​ಎಫ್​ಸಿ ಹಾಗೂ 15ನೇ ಹಣಕಾಸು ಮತ್ತು ಕುಡಿಯುವ ನೀರಿನ ಕಾಮಗಾರಿ, ಕಚೇರಿಯ ದೈನಂದಿನ ಕೆಲಸಗಳ ಟೆಂಡರ್ ದರಗಳ ಮಂಜೂರಾತಿ, ವಸತಿ ಉದ್ದೇಶಕ್ಕಾಗಿ ಭೂ ಪರಿವರ್ತಿತ ಪ್ರದೇಶಗಳ ತಾಂತ್ರಿಕ ಅನುಮೋದನೆ, ಸಕ್ಕಿಂಗ್ ಮಷಿನ್ ದರ ನಿಗದಿ ಮತ್ತು ಜಮಾ-ಖರ್ಚಿಗೆ ಮಂಜೂರಾತಿ ನೀಡಲಾಯಿತು.
ಪುರಸಭೆ ಅಧ್ಯಕ್ಷೆ ಮಮತಾ ಮಾಗಿ, ಸದಸ್ಯರಾದ ಅಯೂಬಖಾನ್ ಪಠಾಣ, ಮಹಮ್ಮದಗೌಸ್ ಗುಲ್ಮಿ, ರಮೇಶ ಸಿದ್ದುನವರ, ರಾಜು ಬಡ್ಡಿ, ಸುರೇಶ ಕುರಗೋಡಿ, ಎಸ್.ಎನ್. ಅಕ್ಕಿ, ಬಸವರಾಜ ಕಟ್ಟಿಮನಿ, ಸೋಮಣ್ಣ ಕುರಿ, ರಾಜು ಟೋಪಣ್ಣವರ, ಆಂಜನೇಯ ಗುಡಗೇರಿ ಮತ್ತಿತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net