ಮನೆ ಬಾಗಿಲು ಮುರಿದು ಚಿನ್ನಾಭರಣ ಕಳ್ಳತನ

ಕಳ್ಳತನವಾದ ಮನೆ
ಕಳ್ಳತನವಾದ ಮನೆ
Published on

ಶಿಗ್ಗಾಂವಿ: ಮನೆ ಬಾಗಿಲು ಮುರಿದು 3.85 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿಕೊಂಡು ಪರಾರಿಯಾದ ಟನೆ ತಾಲೂಕಿನ ಬತ್ತಿಕೊಪ್ಪ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮಲ್ಲಿಕಾರ್ಜುನ ಅರ್ಜಪ್ಪ ಗೊಬ್ಬರಗುಂಪಿ (61) ಎಂಬುವರ ಮನೆ ಕಳ್ಳತನ ಆಗಿರುವುದು.

ಇವರು ಮನೆಯಲ್ಲಿ ಇಲ್ಲದ ಸಮಯದಲ್ಲಿ ಯಾರೋ ಕಳ್ಳರು ಮನೆ ಬಾಗಿಲು ಮುರಿದು ಒಳಗೆ ನುಗ್ಗಿ 1 ಲಕ್ಷ ರೂ. ನಗದು ಸೇರಿ 3.85 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದಾರೆ. ಈ ಕುರಿತು ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net