ಜೇನು ಹುಳು ದಾಳಿ ‘20ಕ್ಕೂ ಅಧಿಕ ಜನರಿಗೆ ಗಾಯ’

ಜೇನು ಹುಳುಗಳ ದಾಳಿಗೆ ಒಳಗಾಗಿ ಹಾನಗಲ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜನರು.
ಜೇನು ಹುಳುಗಳ ದಾಳಿಗೆ ಒಳಗಾಗಿ ಹಾನಗಲ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜನರು.
Published on
ಹಾನಗಲ್ಲ: ಜೇನು ಹುಳುಗಳ ದಾಳಿಗೆ 20ಕ್ಕೂ ಅಧಿಕ ಜನರು ಗಾಯಗೊಂಡ ಘಟನೆ ಬುಧವಾರ ಇಲ್ಲಿನ ನ್ಯಾಯಾಲಯ ಮುಂಭಾಗದ ಮುಖ್ಯ ರಸ್ತೆಯಲ್ಲಿ ಜರುಗಿದ್ದು, ಗಾಯಗೊಂಡವರು ಇಲ್ಲಿನ ಸರ್ಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಜೇನು ಹುಳು ಕಚ್ಚಿಸಿಕೊಂಡವರು ಚಿಕಿತ್ಸೆ ಪಡೆದಿದ್ದಾರೆ.
ನ್ಯಾಯಾಲಯ ಹಾಗೂ ಪ್ರವಾಸಿ ಮಂದಿರದ ಸಮೀಪದ ಬಹುಮಹಡಿ ಕಟ್ಟಡದಲ್ಲಿ ಗೂಡು ಕಟ್ಟಿದ್ದ ಜೇನು ಹುಳುಗಳು ಏಕಾಏಕಿ ಜನರ ಮೇಲೆ ದಾಳಿ ಮಾಡಿ ಕಚ್ಚಿವೆ. ಹುಬ್ಬಳ್ಳಿ-ಹಾನಗಲ್ಲ ಮುಖ್ಯ ರಸ್ತೆಯಲ್ಲಿ ಪಾದಚಾರಿಗಳು, ವಾಹನ ಸವಾರರ ಮೇಲೆಯೂ ಮುಗಿಬಿದ್ದ ಜೇನು ಹುಳುಗಳು ಕಂಡವರಿಗೆಲ್ಲ ಬೆನ್ನಟ್ಟಿ ಕಚ್ಚಿವೆ. ಕೆಲವು ವಕೀಲರು ಜೇನು ಹುಳುಗಳ ದಾಳಿಗೆ ಒಳಗಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net