

ಪ್ರಮುಖ ಮುಖ್ಯಾಂಶಗಳು
ಹಿರೇಕೆರೂರು: ಉದ್ಯೋಗಕ್ಕಾಗಿಪ್ರವರ್ಗ-2ಎಅಡಿ ಮೀಸಲಾತಿ ಆದೇಶ ನೀಡುವುದುಸೇರಿದಂತೆ ವಿವಿಧ ಬೇಡಿಕೆಈಡೇರಿಸುವಂತೆ ಆಗ್ರಹಿಸಿ ತಾಲೂಕುಬಣಜಿಗ ಸಮಾಜ ಕ್ಷೇಮಾಭಿವೃದ್ಧಿಸಂಘದ ವತಿಯಿಂದ ಪಟ್ಟಣದಲ್ಲಿತಹಸೀಲ್ದಾರ್ ಕಚೇರಿ ಎದುರುಮಂಗಳವಾರ ಪ್ರತಿಭಟನೆ ನಡೆಸಿ,ಶಿರಸ್ತೇದಾರ್ಎಂ.ಎಸ್.ಬೆನ್ನೂರಮಠಅವರಿಗೆ ಮನವಿ ಸಲ್ಲಿಸಲಾಯಿತು.
ತಾಲೂಕುಸಂಘದ ಅಧ್ಯಕ್ಷ ಕಲ್ಯಾಣಪ್ಪ ಹಂಚಿನಮಾತನಾಡಿ,ರಾಜ್ಯದಹಲವು ಜಿಲ್ಲೆಗಳು ಮತ್ತು ತಾಲೂಕುಗಳಲ್ಲಿಈಗಾಗಲೇ ನಮ್ಮ ಸಮಾಜದವರಿಗೆಉದ್ಯೋಗಕ್ಕಾಗಿ ಪ್ರವರ್ಗ 2ಎಮಿಸಲಾತಿ ಆದೇಶ ನೀಡುತ್ತಿದ್ದಾರೆ.ಇದಕ್ಕೆಸಂಬಂಧಿಸಿದಂತೆ ಮೈಸೂರು ಜಿಲ್ಲೆಯಕೊಳ್ಳೆಗಾಲದ ನಮ್ಮ ಸಮುದಾಯದಶಿಕ್ಷಕಿ ಸುನಿತಾ ವಿ.ಎಸ್.ಎಂಬುವರುರಾಜ್ಯದ ಉಚ್ಚ ನ್ಯಾಯಾಲಯದಮೆಟ್ಟಿಲೆರಿದ್ದರು.ನ್ಯಾಯಮೂರ್ತಿಗಳಾದಸೂರಜ್ ಗೋವಿಂದರಾಜು ಅವರ ಪೀಠವು,ಬಣಜಿಗಸಮುದಾಯವನ್ನು ಉದ್ಯೋಗ ಉದ್ದೇಶಕ್ಕಾಗಿಪ್ರವರ್ಗ-2ಎಹಾಗೂ ಶಿಕ್ಷಣ ಉದ್ದೇಶಕ್ಕಾಗಿಪ್ರವರ್ಗ 2ಬಿಅಡಿಯಲ್ಲಿ ವರ್ಗಿಕರಿಸುವುದುಪರಿಚ್ಛೇದದ ಉಲ್ಲಂಘನೆಯಾಗುತ್ತದೆ.ಅದಕ್ಕಾಗಿಈ ಸಮುದಾಯವನ್ನು ಗ್ರೂಪ್ ಡಿಅಡಿಯಲ್ಲಿ ಮರು ವರ್ಗಿಕರಿಸಬೇಕುಎಂದು ಆದೇಶ ನೀಡಿದೆ ಎಂದರು.
ಬಣಜಿಗಸಮಾಜ ಶೈಕ್ಷಣಿಕವಾಗಿ ಹಿಂದುಳಿದಿರುವುದರಿಂದಸರ್ಕಾರಿ ನೇಮಕಾತಿಗಳಿಂದ ಅವಕಾಶವಂಚಿತರಾಗುತ್ತಿದೆ.ಇನ್ನುಮುಂದೆ ನ್ಯಾಯಾಲಯದ ಆದೇಶ ಪ್ರಕಾರನಮ್ಮ ಸಮುದಾಯಕ್ಕೆ ಉದ್ಯೋಗಕ್ಕಾಗಿಪ್ರವರ್ಗ 2ಎಮೀಸಲಾತಿ ಆದೇಶ ನೀಡುವಂತೆ ಮನವಿಮಾಡಿದರು.
ತಾಲೂಕುಬಣಜಿಗ ಸಮಾಜದ ಕ್ಷೇಮಾಭಿವೃದ್ಧಿಸಂಘದ ಗೌರವಾಧ್ಯಕ್ಷ ವೀರಪ್ಪಎಣ್ಣಿ,ಉಪಾಧ್ಯಕ್ಷಚಂದ್ರಪ್ಪ ಹಲವಾಲದ,ಸಹಕಾರ್ಯದರ್ಶಿಈರಣ್ಣ ಹಾದ್ರಿಹಳ್ಳಿ,ಸಿದ್ದಲಿಂಗೇಶಶೆಟ್ಟರ,ಬಸವರಾಜಶೆಟ್ಟರ,ಇಂದುಧರಶೆಟ್ಟರ,ಶಿವಲಿಂಗಪ್ಪಕಲ್ಯಾಣಿ,ಜಿ.ಕೆ.ಶೆಟ್ಟರ,ಸಂತೋಷಹಂಚಿ, ರಮೇಶದಂದೂರ,ಸೋಮಶೇಖರಎಣ್ಣಿ,ರಮೇಶದಂದೂರ,ಸಂತೋಷಕುಂಸಿ,ಪವನ್ಮುಗಳಗೇರಿ,ವೀರೇಶವಾಲಿಶೆಟ್ಟರ,ಮುರಗೇಶಲಂಗೋಟಿಶೆಟ್ಟರ,ಗುರುಶಾಂತಬಿಳಿಗಿ,ನಾಗರಾಜಅಣಜಿ, ಪವನ್ಮುಗಳಗೇರಿ,ಕವಿತಾಕಲ್ಯಾಣಿ,ಮಹದೇವಕ್ಕಹಾದ್ರಿಹಳ್ಳಿ,ಕವಿತಾಹಲವಾಗಿಲ,ಕವಿತಾಕಂಪ್ಲಿ,ಆಶಾಕಲ್ಯಾಣಿ,ದಯಾನಂದಕಲ್ಯಾಣಿ,ಮಂಜುನಾಥಕಂಪ್ಲಿ,ಮಲ್ಲಿಕಾರ್ಜುನಹಳಕಟ್ಟಿ,ರವಿಶೆಟ್ಟರ, ಸಂತೋಷವಾಲಿ,ರಾಕೇಶಶೆಟ್ಟರ,ಮಾಲತೇಶಕೋರಿ,ರುದ್ರೇಶಬೇತೂರ ಹಾಗೂ ಸಮಾಜದವರು ಇದ್ದರು.