Administration deteriorated ಹದಗೆಟ್ಟ ಹಿರೇಕೆರೂರ ಪಪಂ ಆಡಳಿತ

Administration deteriorated ಹಿರೇಕೆರೂರ ಪಟ್ಟಣದ ಚೌಡಿ ವೃತ್ತದ ಬಳಿಯ ಪಟ್ಟಣ ಪಂಚಾಯಿತಿ ಕಾರ್ಯಾಲಯ.
Administration deteriorated ಹಿರೇಕೆರೂರ ಪಟ್ಟಣದ ಚೌಡಿ ವೃತ್ತದ ಬಳಿಯ ಪಟ್ಟಣ ಪಂಚಾಯಿತಿ ಕಾರ್ಯಾಲಯ.
Published on
ಚನ್ನಶೆಟ್ಟಿ ಸೇರಿದಂತೆ ಹಲವು ಕೆರೆಗಳ ಜಾಗ ಒತ್ತುವರಿಯಾಗಿವೆ. ಇದನ್ನು ತೆರವುಗೊಳಿಸುವ ಗೋಜಿಗೆ ಹೋಗುತ್ತಿಲ್ಲ. ಮುಕ್ತಿ ವಾಹನ ಕೆಟ್ಟು ಹೋಗಿ 1 ವರ್ಷ ಕಳೆದರೂ, ದುರಸ್ತಿ ಮಾಡಿಸುವ ಇಲ್ಲವೇ ಹೊಸ ವಾಹನದ ವ್ಯವಸ್ಥೆ ಮಾಡುತ್ತಿಲ್ಲ. ಇನ್ನು ಸರ್ವಜ್ಞ ವೃತ್ತದಿಂದ ಸುಣ್ಣದ ಕಾಲುವೆ ಅಕ್ಕಪಕ್ಕದ ಚರಂಡಿಗಳಲ್ಲಿ ಹೋಟೆಲ್, ಗೂಡಂಗಡಿ, ಬೀದಿಬದಿ ವ್ಯಾಪಾರಸ್ಥರು ತ್ಯಾಜ್ಯ ಸುರಿಯುತ್ತಿರುವುದರಿಂದ ದುರ್ನಾತ ಹರಡುತ್ತಿದೆ. ಚರಂಡಿ ತುಂಬಿ ಕೊಳಚೆ ನೀರು, ತ್ಯಾಜ್ಯ ಹರಿಯುತ್ತಿದೆ.
"

ಪಪಂ ಪಟ್ಟಣದ ಅಭಿವೃದ್ಧಿಗೆ ಗಮನಹರಿಸುತ್ತಿಲ್ಲ. ಪಪಂ ಮುಖ್ಯಾಧಿಕಾರಿಗಳು ಸ್ಥಳದಲ್ಲಿದ್ದು, ಎಲ್ಲ ಕಾರ್ಯಗಳನ್ನು ಮತ್ತು ನೌಕರರ, ಪೌರಕಾರ್ವಿುಕರ ಕಾರ್ಯದ ಬಗ್ಗೆ ಗಮನಹರಿಸಬೇಕು. ಕೆರೆಗಳ ಒತ್ತುವರಿ ತೆರವುಗೊಳಿಸಬೇಕು.

| ಪ್ರಕಾಶ ಹಿತ್ಲಳ್ಳಿ, ಸ್ಥಳಿಯ ನಿವಾಸಿ.

"

ಹಳೆಯ ವಿದ್ಯುತ್ ದೀಪಕ್ಕೆ ಹೊಸ ದಿನಾಂಕ ಬರೆದು ಅಳವಡಿಸಿದ ಬಗ್ಗೆ ಗುತ್ತಿಗೆದಾರರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗುವುದು. ರಸ್ತೆ, ಚರಂಡಿ, ನೂತನ ಶವದ ವಾಹನದ ವ್ಯವಸ್ಥೆ ಸೇರಿದಂತೆ ಎಲ್ಲವನ್ನು ಸರಿಪಡಿಸಲಾಗುವುದು.

| ಕೋಡಿ ಭೀಮರಾಯ್ ಎನ್.ಟಿ., ಪಪಂ ಮುಖ್ಯಾಧಿಕಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net