ಹಿಂದೂ ಧರ್ಮ ಜಾಗೃತಿಗಾಗಿ ಸಮ್ಮೇಳನ 8ರಂದು

ಬಿತ್ತಿಪತ್ರ ಬಿಡುಗಡೆ
ಬಿತ್ತಿಪತ್ರ ಬಿಡುಗಡೆ
Published on

ರಾಣೆಬೆನ್ನೂರ: ಹಿಂದೂಗಳಲ್ಲಿ ಧರ್ಮ ಜಾಗೃತಿ ಮೂಡಿಸುವ ಉದ್ದೇಶದಿಂದ ಇಲ್ಲಿಯ ಹಿಂದೂ ಸಮ್ಮೇಳನ ಸಮಿತಿ (ದಕ್ಷಿಣ) ವತಿಯಿಂದ ಮಾ. 8ರಂದು ಸಂಜೆ 6 ಗಂಟೆಗೆ ನಗರದ ಹವಾಲ್ದಾರ್ ಹೊಂಡದ ಎದುರಿನ ವಾಲಿಯವರ ಜಾಗದಲ್ಲಿ ಬೃಹತ್ ಹಿಂದೂ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಮಂಜುನಾಥ ಮಣೇಗಾರ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಎಸ್ಎಸ್ 100 ವರ್ಷ ಪೂರೈಯಿಸಿದ ಹಿನ್ನೆಲೆಯಲ್ಲಿ 7 ರೀತಿಯ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದರಲ್ಲಿ ಹಿಂದೂ ಸಮ್ಮೇಳನ ಕೂಡ ಒಂದಾಗಿದೆ. ಇಂಥ ಧರ್ಮ ಜಾಗೃತಿ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರೂ ಕುಟುಂಬ ಸಮೇತ ಆಗಮಿಸಿ ಪಾಲ್ಗೊಳ್ಳಬೇಕು.

ಗದಗ ಶಿವಾನಂದ ಬ್ರಹನ್ಮಠದ ಸದಾಶಿವಾನಂದ ಸ್ವಾಮೀಜಿ ಹಾಗೂ ಹಿಂದೂ ಜಾಗರಣ ವೇದಿಕೆ ಕ್ಷೇತ್ರಿಯ ಸಂಯೋಜಕ ಜಗದೀಶ ಕಾರಂತ ದಿಕ್ಸೂಚಿ ಭಾಷಣ ಮಾಡುವರು. ಇವರ ಭಾಷಣ ಕೇಳುವುದು ಒಂದು ಪರಿವರ್ತನೆಯ ಕಾಲಟ್ಟವಿದ್ದಂತೆ. ಆದ್ದರಿಂದ ಪ್ರತಿಯೊಬ್ಬರೂ ಸಮ್ಮೇಳನದಲ್ಲಿ ಪಾಲ್ಗೊಳ್ಳಬೇಕು ಎಂದರು.

ಸಮ್ಮೇಳನದ ನಿಮಿತ್ತ ಮಾ. 7ರಂದು ಬೆಳಗ್ಗೆ 10 ಗಂಟೆಗೆ ಮಾರುತಿ ನಗರದ ತುಂಗಾಜಲ ಚೌಡೇಶ್ವರಿ ದೇವಸ್ಥಾನದಿಂದ ಬೈಕ್ ರ್ಯಾಲಿ ನಡೆಯಲಿದೆ. ಮಾ. 8ರಂದು ಸಂಜೆ 4 ಗಂಟೆಗೆ ಕೆಇಬಿ ಗಣೇಶ ದೇವಸ್ಥಾನದಿಂದ ಸಮ್ಮೇಳನದ ಶೋಭಾಯಾತ್ರೆ ಜರುಗಲಿದೆ ಎಂದು ತಿಳಿಸಿದರು.

ಪ್ರಮುಖರಾದ ರಾಜು ರೇವಣಕರ, ಕೆ. ಶಿವಲಿಂಗಪ್ಪ, ಸಂದೀಪ ಕುರಡೇಕರ, ಗಿರೀಶ ಮಜ್ಜಗಿ, ಪ್ರಕಾಶ ಬುರಡಿಕಟ್ಟಿ, ಮಂಜುಳಾ ಹತ್ತಿ, ವಿನಯ ಬಾಳನಗೌಡ್ರ, ಯುವರಾಜ ಬ್ಯಾಡಗಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net