ಹೇಮರಡ್ಡಿ ಮಲ್ಲಮ್ಮ ಮನುಕುಲಕ್ಕೆ ಆದರ್ಶ; ಡಾ. ಕಾಂತೇಶರೆಡ್ಡಿ

ಜಯಂತಿ ಆಚರಣೆ
ಜಯಂತಿ ಆಚರಣೆ
Published on

ರಾಣೆಬೆನ್ನೂರು: ಭಕ್ತಿಯ ಮೂಲಕವೇ ಮುಕ್ತಿಯನ್ನು ಪಡೆದು ಮಹಾ ಸಾದ್ವಿಯಾದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಮನುಕುಲದ ಶ್ರೇಷ್ಠ ಆದರ್ಶ ಮಹಿಳೆಯಾಗಿದ್ದಾಳೆ ಎಂದು ಹಿರೇಕೆರೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ. ಕಾಂತೇಶರೆಡ್ಡಿ ಗೋಡಿಹಾಳ ಹೇಳಿದರು.

ನಗರದ ವೇಮನ ವಿದ್ಯಾವರ್ಧಕ ಸಂಘದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮನ 604ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಲ್ಲಮ್ಮ ತನ್ನ ಸರಳಗುಣ ಮತ್ತು ಆಚರಣೆಗಳಿಂದ ಏನೇ ಕಷ್ಟಗಳು ಬಂದರು ಸಹಿಸಿಕೊಂಡು ಶ್ರೀಶೈಲ ಚನ್ನಮಲ್ಲಿಕಾರ್ಜುನನ ಮೇಲಿನ ಭಕ್ತಿಯಿಂದ ಎಲ್ಲವನ್ನು ಸಹಿಸಿಕೊಂಡಳು. ಆದ್ದರಿಂದ ಪವಾಡದ ರೀತಿಯಲ್ಲಿ ಮಲ್ಲಮ್ಮ ಕಾರ್ಯಗಳು ಜನಸಾಮಾನ್ಯರ ಕಷ್ಟಗಳನ್ನು ದೂರಮಾಡಿದವು. ಮೈದುನ ವೇಮನನನ್ನು ಯೋಗಿಯನ್ನಾಗಿ ಮಾಡಿ ಆದರ್ಶ ಪ್ರಾಯಯಳಾದಳು ಎಂದರು.

ವೇಮನ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಮನೋಜ ಸಾವಕಾರ ಮಾತನಾಡಿ, ಮಲ್ಲಮ್ಮನ ಆದರ್ಶ ಮತ್ತು ಕಾಯಕ ತತ್ವ 12ನೇ ಶತಮಾನದ ಶರಣರ ಮಾದರಿಯಾಗಿದ್ದು ದುಡಿದು ಉಣ್ಣುವ ಸಂಸತಿ ಹೊಂದಿದೆ ಎಂದರು.

ಪ್ರಮುಖರಾದ ರಾಮಚಂದ್ರಪ್ಪ ರಾಯರೆಡ್ಡಿ, ಎಲ್.ವಿ. ಸಾವಕಾರ, ಭೋಗೇಶ ರೆಡ್ಡಿ, ಅಶೋಕ ಮೇಲಗಿರಿ, ಸೋಮಣ್ಣ ಮೈದೂರು, ಶಾಮರಡ್ಡಿ ನ್ಯಾಮತಿ, ಮೋಹನ ಬಲ್ಲೂರ, ಎಂ.ಎಲ್. ಎರೆಸೀಮೆ, ರಮೇಶ ಹೊಂಬರಡಿ, ಆರ್.ಡಿ. ಹೊಂಬರಡಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net