ಜಿಪಂ ಸಿಇಒ ಸ್ಥಾನಕ್ಕೆ ದಲಜೀತ್ ಕುಮಾರ ನೇಮಕ; ರುಚಿ ಬಿಂದಲ್ ವರ್ಗಾವಣೆಯಿಂದ ತೆರವಾಗಿದ್ದ ಹುದ್ದೆ

Haveri, ZP CEO, State Governament, IAS Daljeeth Kumar,
Haveri, ZP CEO, State Governament, IAS Daljeeth Kumar,
Published on
ಹಾವೇರಿ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ (ಸಿಇಒ) ಸ್ಥಾನಕ್ಕೆ ದಲಜೀತ್ ಕುಮಾರ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಮಂಗಳವಾರ ಆದೇಶಿಸಿದೆ.
ಹಾವೇರಿ ಜಿಪಂ ಸಿಇಒ ಆಗಿದ್ದ ರುಚಿ ಬಿಂದಲ್ ಅವರನ್ನು ಹಣಕಾಸು ಇಲಾಖೆಯ ಉಪ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಶನಿವಾರ ಆದೇಶಿಸಿತ್ತು. ಇದರ ಬೆನ್ನಲ್ಲೇ ತೆರವಾದ ಹುದ್ದೆಗೆ ದಲಜೀತ್ ಕುಮಾರ್ ಅವರನ್ನು ನೇಮಿಸಿದೆ.
ದಲಜೀತ್ ಕುಮಾರ ಅವರು 2021ನೇ ಐಎಎಸ್ ಬ್ಯಾಚ್‌ನ ಅಧಿಕಾರಿಯಾಗಿದ್ದು, ಬೆಂಗಳೂರು ಸೆಂಟ್ರಲ್ ಸಿಟಿ ಕಾರ್ಪೋರೇಷನ್‌ನ ಹೆಚ್ಚುವರಿ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದರು. ಮಂಗಳವಾರ ಹಾವೇರಿ ಜಿಪಂ ಸಿಇಒ ಸ್ಥಾನಕ್ಕೆ ಸರ್ಕಾರ ವರ್ಗಾವಣೆ ಮಾಡಿ ಆದೇಶ ನೀಡಿದೆ. ದಲಜೀತ್ ಕುಮಾರ್ ಬುಧವಾರ ಹಾವೇರಿ ಜಿಪಂ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net