ಬ್ಯಾಂಕ್ ಖಾತೆ ನಿರ್ವಹಣೆ, ತೆರಿಗೆ ಮತ್ತು ಶುಲ್ಕ ವಸೂಲಿ, ಆದಾಯ-ವೆಚ್ಚ ಲೆಕ್ಕಪತ್ರ ಮತ್ತು ಬಜೆಟ್ ತಯಾರಿ, ಅನುದಾನ ಬಳಕೆ ಮತ್ತು ಆಡಿಟ್ ಅನುಸರಣೆ, ರಸ್ತೆ, ನೀರು, ಚರಂಡಿ, ಬೀದಿದೀಪ ಕಾಮಗಾರಿಗಳ ಮೇಲ್ವಿಚಾರಣೆ, ಕಾಮಗಾರಿಗಳ ಗುಣಮಟ್ಟ ಪರಿಶೀಲನೆ, ಪ್ರಗತಿ ವರದಿ ಸಲ್ಲಿಕೆ, ನರೇಗಾ ಯೋಜನೆಯ ಜಾಬ್ ಕಾರ್ಡ್ ವಿತರಣೆ, ಕೆಲಸ ಒದಗಿಸುವುದು, ಮತ್ತು ಮಸ್ಟರ್ ರೋಲ್ ನಿರ್ವಹಣೆ, ಕೂಲಿ ಪಾವತಿ ಮೇಲ್ವಿಚಾರಣೆ, ಸಾಮಾಜಿಕ ಲೆಕ್ಕಪರಿಶೋಧನೆಗೆ ದಾಖಲೆ ಒದಗಿಸುವುದು, ಗ್ರಾಮ ಸ್ವಚ್ಛತಾ ಕಾರ್ಯಕ್ರಮ ಜಾರಿ, ಕಸದ ವಿಲೇವಾರಿ ಮತ್ತು ಕುಡಿಯುವ ನೀರಿನ ಸ್ವಚ್ಛತೆ, ಆರೋಗ್ಯ ಕುರಿತು ವಿವಿಧ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದರು.